ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್‌ನಲ್ಲಿ ಶಕ್ತಿಶಾಲಿ ಸ್ಫೋಟಕ್ಕೆ 16 ಜನರ ಬಲಿ (Peshawar | Terrorist | Cantonment | Pakistan)
Feedback Print Bookmark and Share
 
ಪಾಕಿಸ್ತಾನದಲ್ಲಿ ಮತ್ತೆ ಉಗ್ರಗಾಮಿಗಳು ಅಟ್ಟಹಾಸ ಮೆರೆದಿದ್ದು, ಶುಕ್ರವಾರ ಪೇಶಾವರದ ದಂಡುಪ್ರದೇಶದಲ್ಲಿರುವ ಗುಪ್ತಚರ ಸಂಸ್ಥೆಯ ಕಚೇರಿಯಲ್ಲಿ ಶಕ್ತಿಶಾಲಿ ಸ್ಫೋಟ ಸಂಭವಿಸಿ ಕನಿಷ್ಠ 16 ಜನರು ಬಲಿಯಾಗಿದ್ದಾರೆ ಮತ್ತು 35 ಜನರು ಗಾಯಗೊಂಡಿದ್ದಾರೆ. ಬೆಳಿಗ್ಗೆ 6.40ಕ್ಕೆ ದಾಳಿ ನಡೆದಿದ್ದು, 5 ದೇಹಗಳನ್ನು ಮತ್ತು ಗಾಯಗೊಂಡ 30 ಜನರನ್ನು ಲೇಡಿ ರೀಡಿಂಗ್ ಆಸ್ಪತ್ರೆ ಮತ್ತು ಮಿಲಿಟರಿ ಆಸ್ಪತ್ರೆಗೆ ಸೇರಿಸಲಾಗಿದೆ.

ದಾಳಿಗೊಳಗಾದ ಗುಪ್ತಚರ ಏಜೆನ್ಸಿ ಕಚೇರಿಯು ದಂಡುಪ್ರದೇಶದ ಕೈಬರ್ ರಸ್ತೆಯಲ್ಲಿದೆ. ಕಾರ್ ಬಾಂಬ್ ಮ‌ೂಲಕ ಕಚೇರಿ ಮೇಲೆ ದಾಳಿ ಮಾಡಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆದರೆ ಸ್ಫೋಟಕಗಳನ್ನು ಆತ್ಮಾಹುತಿ ಬಾಂಬರ್‌ನಿಂದ ಅಥವಾ ದೂರನಿಯಂತ್ರಕದಿಂದ ಸ್ಫೋಟಿಸಲಾಯಿತೇ ಎನ್ನುವುದು ದೃಢಪಟ್ಟಿಲ್ಲ. ಸ್ಫೋಟ ಸಂಭವಿಸುವುದಕ್ಕೆ ಮುಂಚೆ ಗುಂಡಿನ ಸದ್ದು ಕೂಡ ಕೇಳಿಬಂತೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಸುಮಾರು 20 ಕಿಮೀ ದೂರದವರೆಗೆ ಸ್ಪೋಟದ ಸದ್ದು ಕಿವಿಗಪ್ಪಳಿಸಿದ್ದು, ಗುಪ್ತಚರ ಏಜನ್ಸಿ ಕಚೇರಿಯ ಒಂದು ಭಾಗವನ್ನು ನಾಶ ಮಾಡಿದೆ. ಕೈಬರ್ ರಸ್ತೆಯನ್ನು ಪೊಲೀಸರು ಮುಚ್ಚಿದ್ದು, ತನಿಖೆದಾರರು ಸ್ಫೋಟದ ಸ್ಥಳವನ್ನು ಸುಳಿವುಗಳಿಗಾಗಿ ಶೋಧಿಸುತ್ತಿದ್ದಾರೆ. ಪೇಶಾವರವು ಇತ್ತೀಚೆಗೆ ಭೀಕರ ಬಾಂಬ್ ದಾಳಿಗಳ ಅಲೆಗಳಿಂದ ನಲುಗಿಹೋಗಿದೆ. ಕಳೆದ ತಿಂಗಳು ನಗರದ ವಾಣಿಜ್ಯ ಕೇಂದ್ರಕ್ಕೆ ಕಾರ್ ಬಾಂಬ್ ದಾಳಿ ನಡೆದಾಗ ಸುಮಾರು 120 ಜನರು ಅಸುನೀಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ