ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶ್ರೀಲಂಕಾದ ಉನ್ನತ ಜನರಲ್ ಫೋನ್‌ಸೆಕಾ ರಾಜೀನಾಮೆ (Sri Lanka | President | LTTE | Fonseka)
Feedback Print Bookmark and Share
 
ಎಲ್‌ಟಿಟಿಇ ಸೋಲಿಗೆ ಸೂತ್ರಧಾರರಾದ ಶ್ರೀಲಂಕಾದ ಉನ್ನತ ಜನರಲ್ ರಾಜೀನಾಮೆ ನೀಡಿದ್ದಾರೆಂದು ಮ‌ೂಲಗಳು ತಿಳಿಸಿದ್ದು, ವಿರೋಧಿ ಅಭ್ಯರ್ಥಿಯಾಗಿ ಅವರು ಅಧ್ಯಕ್ಷೀಯ ಚುನಾವಣೆಗೆ ನಿಲ್ಲಲಿದ್ದಾರೆಂದು ದಟ್ಟವಾದ ಊಹಾಪೋಹ ಹರಡಿದೆ.

ರಾಜೀನಾಮೆ ನೀಡಿರುವ ಜನರಲ್ ಸರತ್ ಪೋನ್‌ಸೆಕಾ ಅವರು, ತಮ್ಮ ಮುಖ್ಯ ದಂಡಾಧಿಕಾರಿ ಅಧ್ಯಕ್ಷ ಮಹೀಂದ್ರ ರಾಜಪಕ್ಷ ಅವರನ್ನು ಎಪ್ರಿಲ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ಮುಖಾಮುಖಿಯಾಗುವರೆಂದು ನಿರೀಕ್ಷಿಸಲಾಗಿದೆ. ಫೋನ್‌ಸೆಕಾ ಚುನಾವಣೆ ಕಣಕ್ಕೆ ಇಳಿದರೆ, ರಾಜಪಕ್ಷ ಅವರಿಗೆ ಬೆಂಬಲಿಸುವ ಮುಖ್ಯ ಮತದಾರರ ನೆಲೆ ದುರ್ಬಲವಾಗಲಿದೆಯೆಂದು ವಿಶ್ಲೇಷಕರು ಭಾವಿಸಿದ್ದು, ಯುದ್ಧದ ಜಯದಿಂದ ರಾಜಕೀಯ ಲಾಭ ಪಡೆದಿರುವ ರಾಜಪಕ್ಷ ಅವರ ಏಕಸ್ವಾಮ್ಯತೆ ಕುಂದಿಸುತ್ತದೆ.

ಜನರಲ್ ಫೋನ್‌ಸೆಕಾ ಅವರು ಅಧ್ಯಕ್ಷರಿಗೆ ತಮ್ಮ ರಾಜೀನಾಮೆ ಪತ್ರವನ್ನು ಕಳಿಸಿದ್ದಾರೆಂದು ಮಿಲಿಟರಿ ಮ‌ೂಲಗಳು ಹೇಳಿವೆ.ಆಗಿನ ಸೇನಾ ಕಮಾಂಡರ್ ಹುದ್ದೆಯಲ್ಲಿದ್ದವರನ್ನು ನೂತನವಾಗಿ ಸೃಷ್ಟಿಸಿದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ಹುದ್ದೆಗೆ ರಾಜಪಕ್ಷ ಬಡ್ತಿ ನೀಡಿದ್ದನ್ನು ಫೋನ್‌ಸೆಕಾಗೆ ಯುದ್ಧಕಾಲದಲ್ಲಿ ನೀಡಿದ್ದ ವ್ಯಾಪಕ ಅಧಿಕಾರವನ್ನು ತಟಸ್ಥಗೊಳಿಸುವ ಯತ್ನವೆಂದು ವಿಶ್ಲೇಷಕರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ