ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನಿದ್ರೆಗೆ ಮನವೊಲಿಸಿ ಕಳ್ಳನನ್ನು ಕಟ್ಟಿಹಾಕಿದ ಮಹಿಳೆ (China | Woman | Liaoning | Zhang)
Feedback Print Bookmark and Share
 
ಚೀನಾದಲ್ಲಿ ಕಳ್ಳತನಕ್ಕೆ ಮನೆಯೊಂದಕ್ಕೆ ನುಗ್ಗಿದ ಕಳ್ಳನು ನಿದ್ರೆಗೆ ಜಾರಿದ ಬಳಿಕ ಹಗ್ಗದಲ್ಲಿ ಕಟ್ಟಿ ಹಾಕಿದ ಮಹಿಳೆಯೊಬ್ಬರು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಮನೆಯೊಳಕ್ಕೆ ನುಗ್ಗಿದ ಕಳ್ಳನು ಆಯಾಸಗೊಂಡಿದ್ದನ್ನು ಕಂಡ ಮಹಿಳೆ ಸ್ವಲ್ಪ ನಿದ್ರೆ ಮಾಡುವಂತೆ ಸೂಚಿಸಿ, ನಿದ್ರೆಯಿಂದ ಎದ್ದ ಬಳಿಕ ಸ್ವಲ್ಪ ಹಣವನ್ನು ಕೊಡುವುದಾಗಿ ಮನವೊಲಿಸಿದಳು. ಮಹಿಳೆಯ ಮಾತನ್ನು ನಂಬಿ ನಿದ್ರೆಗೆ ಜಾರಿದ ಕಳ್ಳ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ದರೋಡೆ ಪ್ರಯತ್ನಕ್ಕಾಗಿ ಕ್ವಿಂಗ್‌ಯಾನ್ ಕೌಂಟಿ ಕೋರ್ಟ್ ಆರೋಪಿಗೆ 6 ವರ್ಷಗಳ ಜೈಲುಶಿಕ್ಷೆ ವಿಧಿಸಿದೆಯೆಂದು ಚೀನಾ ದಿನಪತ್ರಿಕೆ ವರದಿ ಮಾಡಿದೆ. ಜೈಲಿನಲ್ಲಿದ್ದ ಆರೋಪಿ ಕಳೆದವಾರ ಬಿಡುಗಡೆಯಾದ ತಕ್ಷಣವೇ ಕಳ್ಳತನ ಮಾಡಲು ಪ್ರಯತ್ನಿಸಿದ.

ಆಹಾರಕ್ಕೆ ಹಣವಿಲ್ಲದೇ ಜಾಂಗ್ ಎಂಬ ಹೆಸರಿನ ಕಳ್ಳ, 48ರ ಪ್ರಾಯದ ಮಹಿಳೆಯ ಮನೆಗೆ ಸ್ವಲ್ಪ ಹಣ ಕದಿಯುವ ಉದ್ದೇಶಿದಿಂದ ನುಗ್ಗಿದ್ದ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚೀನಾ, ಜಾಂಗ್, ಮಹಿಳೆ