ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 14 ತಿಂಗಳ ಬಳಿಕ ಬಾಂಬ್ ಶೋಧಕ ಶ್ವಾನ ಪತ್ತೆ (Dog | Bomb | Australia | Afgan)
Feedback Print Bookmark and Share
 
ದಕ್ಷಿಣ ಆಫ್ಘಾನಿಸ್ತಾನದಲ್ಲಿ ನಡೆದ ಯುದ್ಧದ ಸಂದರ್ಭದಲ್ಲಿ ಕಣ್ಮರೆಯಾಗಿದ್ದ ಆಸ್ಟ್ರೇಲಿಯಾದ ಬಾಂಬ್ ಪತ್ತೆದಾರಿ ಶ್ವಾನ, ಇದೀಗ 14 ತಿಂಗಳಿನ ಬಳಿಕ ಜೀವಂತವಾಗಿ ಮರಳಿ ಅಚ್ಚರಿ ಮೂಡಿಸಿದೆ.

ಸಿಡ್ನಿ: ಆಸ್ಟ್ರೇಲಿಯದ ಬಾಂಬ್ ಪತ್ತೆಮಾಡುವ ಶ್ವಾನವೊಂದು ಕಣ್ಮರೆಯಾಗಿ 14 ತಿಂಗಳು ಕಳೆದ ಬಳಿಕ ಮತ್ತೆ ಪ್ರತ್ಯಕ್ಷವಾದ ಅಚ್ಚರಿಯ ಸಂಗತಿ ವರದಿಯಾಗಿದೆ. ದಕ್ಷಿಣ ಆಫ್ರಿಕಾದ ಯುದ್ಧಪೀಡಿತ ಪ್ರದೇಶದಲ್ಲಿ ಬಾಂಬ್ ಪತ್ತೆ ಮಾಡಲು ಈ ಶ್ವಾನವನ್ನು ಬಳಸಲಾಗುತ್ತಿತ್ತು.

ಕಪ್ಪು ಲ್ಯಾಬ್ರಡಾರ್ ತಳಿಯ ಶ್ವಾನವನ್ನು ಸ್ಯಾಬಿ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿದ್ದು, ಆಸ್ಟ್ರೇಲಿಯ ವಿಶೇಷ ಮಿಲಿಟರಿ ಪಡೆಯು ರಸ್ತೆಅಂಚಿನಲ್ಲಿ ಬಾಂಬ್ ಪತ್ತೆಮಾಡುವುದಕ್ಕಾಗಿ ಬಳಸಲಾಗುತ್ತಿದ್ದು, ಸುಮಾರು 14 ತಿಂಗಳು ಕಳೆದ ಬಳಿಕ ಆಫ್ಘಾನಿಸ್ತಾನದ ಅಪರಿಚಿತ ವ್ಯಕ್ತಿಯೊಬ್ಬ ಅದನ್ನು ಮರಳಿಸಿ ಹೋಗಿದ್ದಾನೆ.

ಅಮೆರಿಕ ಮತ್ತು ಆಸ್ಟ್ರೇಲಿಯ ಪಡೆಗಳು ಜಂಟಿಯಾಗಿ ತಾಲಿಬಾನ್ ವಿರುದ್ದ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಶ್ವಾನ ನಾಪತ್ತೆಯಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆಸ್ಟ್ರೇಲಿಯಾ, ಶ್ವಾನ, ಬಾಂಬ್