ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಅಣ್ವಸ್ತ್ರ ತಯಾರಿಕೆಗೆ ಚೀನಾ ಯುರೇನಿಯಂ (China | Pakistan | Nuclear bombs | A Q Khan)
Feedback Print Bookmark and Share
 
ಚೀನಾ ಪಾಕಿಸ್ತಾನಕ್ಕೆ ಸ್ವತಃ ತಯಾರಿಸುವ ಕಿಟ್ ಮತ್ತು ಎರಡು ಅಣ್ವಸ್ತ್ರಗಳ ತಯಾರಿಕೆಗೆ ಬೇಕಾದ ಶಸ್ತ್ರಾಸ್ತ್ರ ದರ್ಜೆ ಯುರೇನಿಯಂ ಒದಗಿಸಿದೆಯೆಂದು ಅಮೆರಿಕದ ದಿನಪತ್ರಿಕೆಯೊಂದು ತಿಳಿಸಿದೆ. ಕಳಂಕಿತ ಪಾಕಿಸ್ತಾನದ ವಿಜ್ಞಾನಿ ಎ.ಕ್ಯೂ.ಖಾನ್ ಟಿಪ್ಪಣಿಗಳನ್ನು ಉಲ್ಲೇಖಿಸಿ ಅಮೆರಿಕದ ದಿನಪತ್ರಿಕೆ ಮೇಲಿನ ವಿಷಯ ತಿಳಿಸಿದೆ.

ಚೀನಾದ ಮಾವೊ ಜೆಡಾಂಗ್ ಮತ್ತು ಪಾಕಿಸ್ತಾನದ ಪ್ರಧಾನಮಂತ್ರಿ ಜುಲ್ಫಿಕರ್ ಅಲಿ ಭುಟ್ಟೊ ನಡುವೆ 1976ರಲ್ಲಿ ಕುದುರಿದ ರಹಸ್ಯ ಅಣು ಒಪ್ಪಂದದ ಭಾಗವಾಗಿ ಪರಮಾಣು ಪ್ರಸರಣ ಪ್ರಕ್ರಿಯೆಯು ಉದ್ದೇಶಪೂರ್ವಕವಾಗಿ ನಡೆದಿದೆಯೆಂದು ವಾಷಿಂಗ್ಟನ್ ಪೋಸ್ಟ್ ತಿಳಿಸಿದೆ.

ತಮ್ಮ ವೈಯಕ್ತಿಕ ಮನವಿ ಮೇಲೆ ಚೀನಾದ ಸಚಿವರು ಶಸ್ತ್ರಾಸ್ತ್ರ ದರ್ಜೆಯ ಸಂಸ್ಕರಿತ 50 ಕಿಲೋಗ್ರಾಂ ಯುರೇನಿಯಂ ನೀಡಿದ್ದು, ಎರಡು ಅಣ್ವಸ್ತ್ರಗಳಿಗೆ ಸಾಕಾಗುವಷ್ಟಿದೆಯೆಂದು ಖಾನ್ ತಮ್ಮ 11 ಪುಟಗಳ ಪಾಕಿಸ್ತಾನ ಬಾಂಬ್ ಕಾರ್ಯಕ್ರಮದ ವಿವರಗಳನ್ನು ಬರೆದಿದ್ದಾರೆ. ಅನಧಿಕೃತ ಅಣ್ವಸ್ತ್ರ ಪ್ರಸರಣಕ್ಕಾಗಿ 2004 ಜನವರಿಯಲ್ಲಿ ಬಂಧಿತರಾದ ಖಾನ್ ಪಾಕಿಸ್ತಾನದ ಗುಪ್ತಚರ ಸಂಸ್ಥೆಗಾಗಿ ಈ ಟಿಪ್ಪಣಿಗಳನ್ನು ಬರೆದಿದ್ದಾರೆಂದು ದಿನಪತ್ರಿಕೆ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚೀನಾ, ಪಾಕಿಸ್ತಾನ, ಖಾನ್, ಅಮೆರಿಕ