ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕೂದಲಿಂದ ಬಸ್ ಎಳೆದ ಮಂಜಿತ್ ಗಿನ್ನಿಸ್ ದಾಖಲೆ (Manjit | Guinness | Indian | Singh)
Feedback Print Bookmark and Share
 
ಭಾರತೀಯ ಮ‌ೂಲದ ಮಂಜಿತ್ ಸಿಂಗ್ ಏಳು ಟನ್ ತೂಕದ ಡಬ್ಬಲ್ ಡೆಕ್ಕರ್ ಬಸ್ಸನ್ನು ತಮ್ಮ ತಲೆಯಕೂದಲುಗಳಿಂದ 21.2 ಮೀಟರ್ ಉದ್ದದವರೆಗೆ ಎಳೆದ ಸಾಹಸ ಮಾಡಿದ್ದು, ಗಿನ್ನೆಸ್ ವಿಶ್ವ ದಾಖಲೆಯ ದಿನದಂದೇ ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸಿದ್ದಾರೆ.

59 ವರ್ಷ ವಯಸ್ಸಿನ ಲೈಸೆಸ್ಟರ್‌ನ ಉಕ್ಕಿನ ಮನುಷ್ಯ ತಮ್ಮ ದಟ್ಟವಾದ ಪೋನಿಟೈಲ್ ಕೂದಲಿಗೆ ಕ್ಲಾಂಪ್ ಜೋಡಿಸಿ ವಿಂಟೇಜ್ ರೌಟ್‌ಮಾಸ್ಟರ್ ಬಸ್ಸನ್ನು 21.2 ಮೀಟರ್ ದೂರದವರೆಗೆ ಕೇಂದ್ರ ಲಂಡನ್ ಬ್ಯಾಟರ್‌ಸೀ ಪಾರ್ಕ್‌ ಮ‌ೂಲಕ ಎಳೆದಿದ್ದಾರೆ.ಐದನೇ ವಾರ್ಷಿಕ ಗಿನ್ನೆಸ್ ವಿಶ್ವದಾಖಲೆ ದಿನದಂದೇ ಇದು ಹೊಂದಿಕೆಯಾಗುತ್ತಿದ್ದು, ಸಾವಿರಾರು ಜನರು ವಿಶ್ವಾದ್ಯಂತ ಗಿನ್ನೆಸ್ ದಾಖಲೆಯಲ್ಲಿ ತಮ್ಮದೇ ಗುರುತು ಮ‌ೂಡಿಸುವ ಪ್ರಯತ್ನ ನಡೆಸಿದ್ದಾರೆ.

2007ರಲ್ಲಿ ಸಿಂಗ್ ಡಬಲ್‌ಡೆಕರ್ ಬಸ್ಸನ್ನು ತನ್ನ ಕಿವಿಗಳ ಮ‌ೂಲಕ ಎಳೆಯುವಲ್ಲಿ ವಿಶ್ವದಾಖಲೆ ಮುರಿಯಲು ವಿಫಲರಾಗಿದ್ದರು. ತಾವು ಸೋಲಿನಿಂದ ನಿರುತ್ಸಾಹಗೊಳ್ಳುವುದಿಲ್ಲ. ಏಕೆಂದರೆ ಇನ್ನೊಂದು ಮ‌ೂಲೆಯಲ್ಲಿ ಯಶಸ್ಸು ಸಹ ಕಾಯುತ್ತಿರುತ್ತದೆ.

ಒಂದೇ ದಾರಿಯೇನೆಂದರೆ ಸಕಾರಾತ್ಮಕವಾಗಿ ಉಳಿಯುವುದು ಎಂದು ಹೇಳಿದ್ದಾರೆ.ಭದ್ರತಾ ಕನ್ಸಲ್‌ಟೆಂಟ್ ಕೆಲಸ ಮಾಡುತ್ತಿರುವ ಸಿಂಗ್, ತಾವು ಯಾವುದೇ ವಿಶೇಷ ತರಬೇತಿ ಪಡೆದಿಲ್ಲ ಮತ್ತು ತಮ್ಮ ಮುರಿಯದ ಕೂದಲಿಗೆ ಯಾವುದೇ ವಿಶೇಷ ಚಿಕಿತ್ಸೆ ನೀಡಿಲ್ಲವೆಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ