ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪತ್ರಕರ್ತರಿಗೆ ಪಾಠ ಕಲಿಸಿದ ಅಧಿಕಾರಿಗಳು (Lahore | Mumbai terror | Terrorist | Kasab)
Feedback Print Bookmark and Share
 
ಮುಂಬೈ ಭಯೋತ್ಪಾದನೆ ದಾಳಿಯ ಬಂಧಿತ ಉಗ್ರಗಾಮಿ ಅಜ್ಮಲ್ ಕಸಬ್ ಕುಟುಂಬ ಪತ್ತೆ ಹಚ್ಚಲು ನೆರವಾಗಿದ್ದಕ್ಕಾಗಿ ಅಧಿಕಾರಿಗಳು ತಮಗೆ ಪಾಠ ಕಲಿಸುತ್ತಿದ್ದಾರೆಂದು ಬಂಧಿತರಾದ ಇಬ್ಬರು ಪಾಕಿಸ್ತಾನ ಪತ್ರಕರ್ತರು ಆರೋಪಿಸಿದ್ದಾರೆ.

ಜೋಯಾ ಮತ್ತು ಚಂದ್ರು ಕ್ರಮವಾಗಿ ದೆಬಾಲ್‌ಪುರ್ ಪ್ರೆಸ್ ಕ್ಲಬ್ ಅಧ್ಯಕ್ಷ ಮತ್ತು ಪ್ರಧಾನಕಾರ್ಯದರ್ಶಿಯಾಗಿದ್ದು, ಪ್ರೆಸ್ ಕ್ಲಬ್ ನಿಧಿ ದುರುಪಯೋಗ ಮತ್ತು ಕಾರು ಕಳ್ಳತನಕ್ಕೆ ಯತ್ನದ ಆರೋಪದ ಮೇಲೆ ಬಂಧಿಸಲಾಗಿದೆ.

ಜೋಯಾ ಮತ್ತು ಚಂದ್ರು ಪಂಜಾಬ್ ಪ್ರಾಂತ್ಯದ ಒಕಾರಾ ಜಿಲ್ಲೆಯ ದಬಾಲ್‌ಪುರ್ ಉಪವಿಭಾಗಕ್ಕೆ ಸೇರಿದ್ದಾರೆ. ಕಸಬ್ ಕುಟುಂಬ ಮತ್ತು ಮನೆಯನ್ನು ಪತ್ತೆ ಮಾಡಿ ಮಾಹಿತಿ ನೀಡಿದ್ದಕ್ಕಾಗಿ ತಮಗೆ ಪಾಠ ಕಲಿಸಲು ಬಂಧಿಸಲಾಗಿದೆಯೆಂದು ಅವರಿಬ್ಬರು ಆರೋಪಿಸಿದ್ದಾರೆ. ಕಸಬ್ ಪಾಕಿಸ್ತಾನ ಪೌರನೆಂಬುದನ್ನು ಇಸ್ಲಾಮಾಬಾದ್ ಆರಂಭದಲ್ಲಿ ನಿರಾಕರಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ