ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನಟಿ ಜತೆ ಪ್ರೇಮಗೀತೆಗೆ ಹೆಜ್ಜೆ ಹಾಕಿದ ಪ್ರಚಂಡ (Nepal | Prachanda | Encounter | Nepal)
Feedback Print Bookmark and Share
 
ನೇಪಾಳದ ಮಾವೋವಾದಿ ನಾಯಕ ಪ್ರಚಂಡ ಮಾವೋವಾದಿಗಳ ಪ್ರತಿಭಟನೆ ಕಾಲದಲ್ಲಿ ಯುವ, ಚಿತ್ರಜಗತ್ತಿನ ರಂಗಿನ ತಾರೆ ಜತೆ ಜನಪ್ರಿಯ ಪ್ರೇಮ ಗೀತೆಯೊಂದರ ಸ್ವರಕ್ಕೆ ಹೆಜ್ಜೆ ಹಾಕುವ ಮ‌ೂಲಕ ಭಿನ್ನ ರೀತಿಯ 'ಎನ್‌ಕೌಂಟರ್‌'ಗೆ ಒಳಗಾಗಿದ್ದಾರೆ.

ಸಿಂಗ್‌ದರ್ಬಾರ್ ಸೆಕ್ರೆಟರಿಯೆಟ್‌ ಮುಂದೆ ಮಾವೋವಾದಿ ಕಾರ್ಯಕರ್ತರು ಕಲೆತಿದ್ದಾಗ, ಜಾನಪದ ಸಂಗೀತದ ಬ್ಯಾಂಡ್‌ಗಳು ಮತ್ತು ಪ್ರತಿಭಟನೆಕಾರರ ಜತೆ ನೃತ್ಯಗಾರರ ತಂಡ ಜತೆಗೂಡಿ ಹಬ್ಬದ ವಾತಾವರಣ ತುಂಬಿತ್ತು. ನೇಪಾಳ ಚಿತ್ರೋದ್ಯಮದ 20ರ ಹರೆಯದ ರೇಖಾ ಥಾಪಾ ಮಾವೋವಾದಿ ವರಿಷ್ಠ ಪ್ರಚಂಡರನ್ನು ತಮ್ಮ ಜತೆ ನೃತ್ಯಮಾಡುವಂತೆ ಕರೆದರು.

ಕಪ್ಪು ಸೂಟ್ ಧರಿಸಿದ್ದ ಪ್ರಚಂಡ, ಟ್ರಕ್ ಕಮ್ ತಾತ್ಕಾಲಿಕ ವೇದಿಕೆ ಮೇಲೇರಿ ನಟಿ ಹಾಡಲು ಆರಂಭಿಸಿದ ಜನಪ್ರಿಯ ಪ್ರೇಮಗೀತೆಯ ಸ್ವರಕ್ಕೆ ಹೆಜ್ಜೆ ಹಾಕಿ ಹಾಡಿಗೆ ಧ್ವನಿಗೂಡಿಸಿದಾಗ ಬೆಂಬಲಿಗರು ಹರ್ಷೋದ್ಗಾರ ಮಾಡಿದರು.

ನೇಪಾಳದ ಪ್ರಮುಖ ದಿನಪತ್ರಿಕೆಗಳು ಪ್ರಚಂಡ ರೇಖಾ ಜತೆ ನೃತ್ಯಮಾಡಿದ ಚಿತ್ರಗಳನ್ನು ಮುಖಪುಟಗಳಲ್ಲಿ ಪ್ರಕಟಿಸಿದೆ. ಆದರೆ ದಿನ ಕಳೆಯುತ್ತಿದ್ದಂತೆ, ಪ್ರತಿಭಟನಾ ಸ್ಥಳದಲ್ಲಿ ಹಿಂಸಾಚಾರ ಭುಗಿಲೆದ್ದು, ಅಶ್ರುವಾಯು ಸಿಡಿಸಿ ಲಾಠಿ ಪ್ರಹಾರ ಮಾಡಿದ್ದರಿಂದ ಮಾಜಿ ಉಪಪ್ರಧಾನಮಂತ್ರಿ ಅಮಿಕ್ ಸರ್ಚಾನ್ ಸೇರಿ 50 ಮಾವೋವಾದಿಗಳು ಗಾಯಗೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ