ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶ್ರೀಲಂಕಾ ಸರ್ಕಾರಕ್ಕೆ ಸೇನೆ ಬಂಡೇಳುವ ಭಯ (Colombo | Sri Lanka | Military | Rajapaksa)
Feedback Print Bookmark and Share
 
ಶ್ರೀಲಂಕಾ ಸೇನೆಯು ಸರ್ಕಾರದ ವಿರುದ್ಧ ದಂಗೆಯೇಳುವ ಭಯ ಆವರಿಸಿ, ಭಾರತ ಸರ್ಕಾರವನ್ನು ಸಂಪರ್ಕಿಸಿ ಮಿಲಿಟರಿ ಸ್ವಾಧೀನಕ್ಕೆ ತೆಗೆದುಕೊಳ್ಳುವುದನ್ನು ತಪ್ಪಿಸುವಂತೆ ಶ್ರೀಲಂಕಾ ಸರ್ಕಾರ ಮನವಿಮಾಡಿದ್ದರಿಂದ ಭಾರತದ ಸೇನಾಪಡೆ ಅಕ್ಬೋಬರ್ ಮಧ್ಯಾವಧಿಯಲ್ಲಿ ಕಟ್ಟೆಚ್ಚರ ವಹಿಸಿದ್ದ ಸಂಗತಿ ಬೆಳಕಿಗೆ ಬಂದಿದೆ.

ಕಳೆದ ಅಕ್ಟೋಬರ್ 15ರ ರಾತ್ರಿ ಲಂಕಾದ ರಾಜಕಾರಣಿಗಳು ಮತ್ತು ಆಡಳಿತಶಾಹಿ ಕೊಲಂಬೊದ ಭಾರತದ ರಾಜತಾಂತ್ರಿಕ ಕಚೇರಿ ಮ‌‌ೂಲಕ ನವದೆಹಲಿ ಜತೆ ಸಂಪರ್ಕ ಸಾಧಿಸಿ ಸೇನೆ ಬಂಡೇಳುವ ಭಯವನ್ನು ವ್ಯಕ್ತಪಡಿಸಿ ಸಹಾಯಕ್ಕಾಗಿ ಯಾಚಿಸಿದ್ದರು. ಗುರುವಾರದವರೆಗೆ ಈ ವಿದ್ಯಮಾನಗಳು ರಾಜಕೀಯ ವದಂತಿಯಾಗಿ ಹರಡಿತ್ತು.

ಇದನ್ನು ನಿರ್ಗಮಿಸುತ್ತಿರುವ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಸರತ್ ಫೋನ್‌ಸೆಕಾ ದಾಖಲೆಯಲ್ಲಿ ಇರಿಸಿದ್ದಾರೆ. ಫೋನ್‌ಸೆಕಾ ಅವರು ಅಧ್ಯಕ್ಷ ಮಹೀಂದ್ರ ರಾಜಪಕ್ಷಗೆ ಬರೆದ ಪತ್ರದಲ್ಲಿ ಕೋಪ, ಬೇಸರ ಮತ್ತು ನೋವನ್ನು ವ್ಯಕ್ತಪಡಿಸಿ ತಮ್ಮ ಅಕಾಲಿಕ ನಿವೃತ್ತಿಗೆ 15 ಕಾರಣಗಳನ್ನು ಪಟ್ಟಿಮಾಡಿದ್ದಾರೆ.

ಕ್ಷಿಪ್ರಕ್ರಾಂತಿಯ ವದಂತಿಗಳನ್ನು ಕುರಿತು ಭಾರತವನ್ನು ಸಂಪರ್ಕಿಸಿದ್ದರಿಂದ ಸೇನೆಯ ವರ್ಚಸ್ಸಿಗೆ ಧಕ್ಕೆಯಾಗಿದೆಯೆಂದು ಫೋನ್‌ಸೆಕಾ ಬರೆದಿದ್ದಾರೆ. ರಾಷ್ಟ್ರಕ್ಕೆ ಜಯತಂದುಕೊಟ್ಟ ಸೇನೆ ಬಂಡಾಯ ಏಳುತ್ತದೆಂಬ ಸಂಶಯದಿಂದ ಭಾರತ ಸರ್ಕಾರಕ್ಕೆ ಎಚ್ಚರಿಸಿ ಭಾರತದ ಪಡೆಗಳನ್ನು ಅನವಶ್ಯಕವಾಗಿ ಕಟ್ಟೆಚ್ಚರ ವಹಿಸಿದರು. ಈ ಕ್ರಮದಿಂದ ಸೇನೆಯ ಖ್ಯಾತಿ, ವರ್ಚಸ್ಸಿಗೆ ಧಕ್ಕೆಯಾಗಿದೆ. ಸೇನೆಯನ್ನು ಎಲ್‌ಟಿಟಿಇ ವಿರುದ್ಧ ಐತಿಹಾಸಿಕ ಜಯ ಸಾಧಿಸಿದ್ದಕ್ಕಾಗಿ ತಮ್ಮ ಮೇಲೆ ಸೇನೆ ಇರಿಸಿದ್ದ ನಿಷ್ಠೆಯಿಂದಾಗಿ ಈ ಅನುಮಾನ ಮ‌ೂಡಿದೆಯೆಂದು ಫೋನ್‌ಸೆಕಾ ಬರೆದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ