ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚಂದ್ರನಲ್ಲಿ ಜೀವಜಲ ಪತ್ತೆ ಪ್ರಯೋಗ ಯಶಸ್ವಿ (Nasa | Moon | Crater | Ice)
Feedback Print Bookmark and Share
 
ಚಂದ್ರನ ಅಂಗಳದಲ್ಲಿ ಜೀವಜಲ ಪತ್ತೆ ಮಾಡಲು ಕಳೆದ ತಿಂಗಳು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಪ್ರಯೋಗ ಯಶಸ್ವಿಯಾಗಿದೆಯೆಂದು ಅಮೆರಿಕ ವಿಜ್ಞಾನಿಗಳು ಪ್ರಕಟಿಸಿದ್ದಾರೆ.

ಚಂದ್ರದ ದಕ್ಷಿಣ ದ್ರುವದಲ್ಲಿ ರಾಕೆಟ್ ಮತ್ತು ಪ್ರೋಬ್ ಹಿಮವನ್ನು ಶೋಧಿಸುವ ಆಶಯದೊಂದಿಗೆ ದೊಡ್ಡ ಕಂದಕಕ್ಕೆ ಅಪ್ಪಳಿಸಿತ್ತು. ಕಂದಕದಲ್ಲಿ ಘನೀಕೃತ ಜಲ ಮತ್ತು ನೀರಿನ ಆವಿಯನ್ನು ಪ್ರೋಬ್ ಪತ್ತೆಹಚ್ಚಿದೆ.

ಇದೊಂದು ಎರಡು ಗ್ಯಾಲನ್ ಬಕೆಟ್ ನೀರಿಗೆ ಸಮವೆಂದು ಸಂಶೋಧಕರೊಬ್ಬರು ವಿಶ್ಲೇಷಿಸಿದ್ದಾರೆ. ಅಕ್ಟೋಬರ್ ಪ್ರಯೋಗದಲ್ಲಿ 22000 ಕೇಜಿ ಕೆಂಟಾರ್ ರಾಕೆಟ್ 100 ಕಿಮೀ ಅಗಲದ ಕೇಬಿಯನ್ ಕಂದಕಕ್ಕೆ ಅಪ್ಪಳಿಸುವುದು ಸೇರಿತ್ತು.

ರಾಕೆಟ್ ಹಿಂದೆಯೇ ಅನುಸರಿಸಿದ ಎಲ್‌ಸಿಕ್ರಾಸ್ ಪ್ರೋಬ್‌ನ ಇನ್ಫ್ರಾರೆಡ್ ಸ್ಪೆಕ್ಟ್ರೊಮೀಟರ್ ಕಂದಕದಲ್ಲಿ ಘನೀಕೃತ ನೀರು ಮತ್ತು ನೀರಿನ ಆವಿಯನ್ನು ಗುರುತಿಸಿದ್ದು, ನೀರು ಸೂರ್ಯನಬೆಳಕಿನಿಂದ ವಿಭಜನೆಯಾದಾಗ ಉದ್ಭವಿಸುವ ಹೈಡ್ರೋಕ್ಸಿಲ್ ಕಣವನ್ನು ಗುರುತಿಸಿ ಹೆಚ್ಚುವರಿ ದೃಢೀಕರಣ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ