ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 2 ಬಾರಿ ಮಹಡಿಯಿಂದ ಹಾರಿ ಬದುಕುಳಿದ ಕುಡುಕ (Russian | Melbourne | Moscow | Dive)
Feedback Print Bookmark and Share
 
ಕುಡಿದ ಮತ್ತಿನಲ್ಲಿದ್ದ ರಷ್ಯಾದ ವ್ಯಕ್ತಿಯೊಬ್ಬ ತನ್ನ ಜೀವನ ಕೊನೆಗೊಳಿಸಲು ಐದನೇ ಮಹಡಿಯಿಂದ ಕೆಳಕ್ಕೆ ಬಿದ್ದ, ಆದರೆ ಮೊದಲನೇ ಪ್ರಯತ್ನ ವಿಫಲವಾದಾಗ ಎರಡನೇ ಬಾರಿ ಕೆಳಕ್ಕೆ ಹಾರಿದರೂ ಜೀವ ಹೋಗದೇ ಬದುಕುಳಿದ.

22ರ ಪ್ರಾಯದ ಅಲೆಕ್ಸಿ ರೋಸ್ಕೊವ್ ಮ‌ೂರು ಸೀಸೆ ವೋಡ್ಕಾ ಕುಡಿದು ಮಾಸ್ಕೊದಲ್ಲಿದ್ದ ಐದನೇ ಮಹಡಿಯ ಅಪಾರ್ಟ್‌ಮೆಂಟ್ ಅಡುಗೆಮನೆಯ ಕಿಟಕಿ ತೆರೆದು, ತನ್ನ ಪತ್ನಿ ಯೆಕಾಟೆರಿನಾ ಗಾಬರಿಯಿಂದ ದಿಟ್ಟಿಸುತ್ತಿರುವಾಗಲೇ ಕೆಳಕ್ಕೆ ಹಾರಿದ. ಆದರೆ 15 ಮೀ ಕೆಳಕ್ಕೆ ಬಿದ್ದಾಗಲೂ ಬದುಕುಳಿರುವುದನ್ನು ಕಂಡು ಆಶ್ಚರ್ಯಚಕಿತನಾದ ಅವನ ಪತ್ನಿ ಆಂಬುಲೆನ್ಸ್‌ಗೆ ಕರೆನೀಡಿ ಪತಿಯನ್ನು ಹಿಗ್ಗಾಮುಗ್ಗಾ ಬಯ್ಯಲು ಆರಂಭಿಸಿದಾಗ ಮತ್ತೆ ಮಹಡಿ ಏರಿ ಎರಡನೇ ಬಾರಿ ಜಂಪ್ ಮಾಡಲು ಆರಂಭಿಸಿದ.

ವೈದ್ಯರು ಅಲ್ಲಿಗೆ ಆಗಮಿಸಿದಾಗ ರೊಸ್ಕೊವ್ ಎರಡನೇ ಬಾರಿ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳು ಮಾತ್ರವಾಗಿತ್ತು. ಈಗ ಚಹಾ ಕುಡಿಯುವ ಚಟಕ್ಕೆ ಮಾತ್ರ ದಾಸನಾಗಿರುವ ತಾನು ತನ್ನ ಪತ್ನಿ ಕಿರುಚಿದ ಬಳಿ ಎರಡನೇ ಬಾರಿ ಮಹಡಿಯಿಂದ ಹಾರಲು ನಿರ್ಧರಿಸಿದ್ದಾಗಿ ಹೇಳಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ