ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೌದಿಯಲ್ಲಿ ಇಬ್ಬರು ಭಾರತೀಯರು ಅಪಘಾತಕ್ಕೆ ಬಲಿ (Accident ,Kerala, Saudi , Dubai)
Feedback Print Bookmark and Share
 
ಕೇರಳದ ಕೊಲ್ಲಂಗೆ ಸೇರಿದ ಇಬ್ಬರು ಭಾರತೀಯ ಯುವಕರು ಸೌದಿಅರೇಬಿಯದಲ್ಲಿ ಸಂಭವಿಸಿದ ಅಪಘಾತದಲ್ಲಿ ದುರಂತ ಸಾವಪ್ಪಿದ್ದಾರೆ.

ಎಲೆಕ್ಟ್ರಿಷಿಯನ್‌ಗಳಾಗಿ ಕೆಲಸಮಾಡುತ್ತಿದ್ದ ಯುವಕರಾದ 28ರ ಪ್ರಾಯದ ರಾಜೇಶ್ ಮತ್ತು 32ರ ಪ್ರಾಯದ ಉಲ್ಲಾಸ್ ಡಮ್ಮಾಮ್ ಕಟ್ಟಡ ನಿರ್ಮಾಣ ಸ್ಥಳಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ಇನ್ನೊಂದು ವಾಹನವು ಮುಖಾಮುಖಿ ಡಿಕ್ಕಿಹೊಡೆದು ಇಬ್ಬರೂ ಸಾವಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ರಾಜೇಶ್ ಅವರು ಪತ್ನಿ ನೀತು ಮತ್ತು ಒಂದು ವರ್ಷದ ಮಗುವನ್ನು ಬಿಟ್ಟು ಅಗಲಿದ್ದು, ಉಲ್ಲಾಸ್ ಪತ್ನಿ ಸಿನಿಯನ್ನು ಅಗಲಿದ್ದಾರೆಂದು ಮೃತರ ಸ್ನೇಹಿತ ಸಾಬು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕೇರಳ, ಸೌದಿಅರೇಬಿಯ, ಕೊಲ್ಲಂ