ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕದಲ್ಲಿ 2.2 ಕೋಟಿ ಜನರಿಗೆ ಎಚ್‌1ಎನ್‌1 ಸೋಂಕು (America, H1N1,Shuchet)
Feedback Print Bookmark and Share
 
ಅಮೆರಿಕದಲ್ಲಿ ಏಪ್ರಿಲ್‌ನಿಂದ ಈಚೆಗೆ 2.2 ಕೋಟಿ ಜನರು ಎಚ್‌1ಎನ್‌1 ಮಹಾಮಾರಿಯಿಂದ ಪೀಡಿತರಾಗಿದ್ದು, ಇದುವರೆಗೆ 3900 ಜನರು ಸತ್ತಿದ್ದಾರೆ. 1957ರ ಬಳಿಕ ಇಷ್ಟೊಂದು ವ್ಯಾಪಕವಾಗಿ ಹರಡಿದ ಯಾವುದೇ ಸೋಂಕುರೋಗ ಪತ್ತೆಯಾಗಿಲ್ಲವೆಂದು ಅಮೆರಿಕ ವ್ಯಾಧಿನಿಯಂತ್ರಣ ಮತ್ತು ನಿವಾರಕ ಕೇಂದ್ರ ನಿರ್ದೇಶಕ ಅನ್ನೆ ಶುಚಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಅತೀ ಹೆಚ್ಚು ಕೆಮ್ಮು-ನೆಗಡಿ ಪ್ರಕರಣಗಳು ಕಂಡುಬಂದಿರುವುದು ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆಯೆಂದು ಅವರು ಹೇಳಿದ್ದಾರೆ.

ಅವರ ಹೇಳಿರುವ ಪ್ರಕಾರ,ಸುಮಾರು 18 ವರ್ಷಕ್ಕಿಂತ ಕೆಳಗಿನ ವಯೋಮಾನದ 80 ಲಕ್ಷ ಮಕ್ಕಳು ಎಚ್1ಎನ್1ನಿಂದ ಬಳಲುತ್ತಿದ್ದಾರೆ. ಎಪ್ರಿಲ್ ನಂತರ 36,000 ಮಕ್ಕಳು ಸೇರಿದಂತೆ ಸುಮಾರು 98,000 ಅಮೆರಿಕನ್ನರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಮೆರಿಕ, ಎಚ್1ಎನ್1, ಶುಚಟ್, ಸೋಂಕು