ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪೇಶಾವರದಲ್ಲಿ ಉಗ್ರರ ಹೇಷಾವರ: 7 ಪೊಲೀಸರು ಬಲಿ (Peshavar | Police | Taliban | Pakistan)
Feedback Print Bookmark and Share
 
ಪಾಕಿಸ್ತಾನದಲ್ಲಿ ಉಗ್ರಗಾಮಿಗಳು ಮತ್ತೆ ಅಟ್ಟಹಾಸ ಮೆರೆದಿದ್ದು,ಪೇಶಾವರದಲ್ಲಿ ಸಂಭವಿಸಿದ ಬಾಂಬ್ ಸ್ಫೋಟಕ್ಕೆ 7 ಮಂದಿ ಪೊಲೀಸ್ ಅಧಿಕಾರಿಗಳು ಶನಿವಾರ ಹತರಾಗಿದ್ದಾರೆ.

ಪೇಶಾವರದ ಪಶ್ತಕಾರ ಚೌಕದಲ್ಲಿ ಈ ಸ್ಫೋಟ ಸಂಭವಿಸಿದ್ದು, ಸ್ಫೋಟದಿಂದ ಸಂಪೂರ್ಣ ನಜ್ಜುಗುಜ್ಜಾದ ಕಾರುಗಳನ್ನು ವಿಡಿಯೊ ಚಿತ್ರಗಳಲ್ಲಿ ತೋರಿಸಲಾಗಿದ್ದು, ಸ್ಫೋಟದ ಭೀಕರತೆಗೆ ಸಾಕ್ಷಿಯಾಗಿದೆ. ಈ ಬಾರಿ ಉಗ್ರಗಾಮಿಗಳು ಪೊಲೀಸ್ ಅಧಿಕಾರಿಗಳನ್ನೇ ಗುರಿಯಿರಿಸಿ ಬಾಂಬ್ ಸ್ಫೋಟ ನಡೆಸಿದ್ದಾರೆ.

ಪಾಕಿಸ್ತಾನದಲ್ಲಿ ತಾಲಿಬಾನ್ ಉಗ್ರಗಾಮಿಗಳಿಂದ ಬಾಂಬ್ ಸ್ಫೋಟ ದಿನ ಬಿಟ್ಟು ದಿನ ನಡೆಯುತ್ತಿರುವ ಸಾಮಾನ್ಯ ವಿದ್ಯಮಾನವಾಗಿ ಪರಿಣಮಿಸಿದೆ. ಪಾಕಿಸ್ತಾನದ ಸೇನೆಯು ತಾಲಿಬಾನ್ ಉಗ್ರಗಾಮಿಗಳನ್ನು ಮಟ್ಟ ಹಾಕಲು ಕಾರ್ಯಾಚರಣೆ ಆರಂಭಿಸಿದ ಬಳಿಕ ಉಗ್ರರು ಆತ್ಮಾಹುತಿ ಬಾಂಬ್ ಸ್ಫೋಟಗಳ ಮ‌ೂಲಕ ರಕ್ತದೋಕುಳಿ ಹರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ