ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪ್ರತಿಭಾ ಶೋಧದಲ್ಲಿ ಗೆದ್ದ ಕಿವುಡು ಬಾಲಕ ರಾಜಬಾಲ್ (Rajbal, South Africa, TV contest, Talent)
Feedback Print Bookmark and Share
 
ಹುಟ್ಟು ಕಿವುಡನಾಗಿದ್ದರೂ 19 ವರ್ಷ ವಯಸ್ಸಿನ ದಕ್ಷಿಣ ಆಫ್ರಿಕಾದ ಭಾರತೀಯ ಬಾಲಕ ಹಿಪ್-ಹಾಪ್ ನೃತ್ಯಗಾರ ಡಾರೆನ್ ರಾಜ್‌ಪಾಲ್ ರಾಷ್ಟ್ರದ ಅತ್ಯುತ್ತಮ ಪ್ರತಿಭೆ ಶೋಧಿಸುವ 3 ತಿಂಗಳ ಕಾಲದ ಟಿವಿ ಸ್ಪರ್ಧೆಯಲ್ಲಿ ನೂರಾರು ಸ್ಪರ್ಧಿಗಳನ್ನು ಹಿಂದಿಕ್ಕಿ ಜಯಗಳಿಸಿದ್ದಾರೆ.

ಎಸ್ಎ ಗಾಟ್ ಟ್ಯಾಲೆಂಟ್ ಪ್ರದರ್ಶನದ ಫೈನಲ್‌ನಲ್ಲಿ 33,000 ಡಾಲರ್ ವಿಜೇತನಾದ ಯುವಕ ಕಿವುಡು ವಿದ್ಯಾರ್ಥಿಗಳಿಗೆ ತಮ್ಮ ಬಹುಮಾನದ ಹಣದಲ್ಲಿ ಸ್ವಲ್ಪ ಭಾಗ ವಿನಿಯೋಗಿಸುವುದಾಗಿ ಹೇಳಿದ್ದಾನೆ. 2004ರಲ್ಲಿ ದಕ್ಷಿಣ ಆಫ್ರಿಕಾ ಮಿಸ್ಟರ್ ಬಾಲಿವುಡ್ ಟೈಟಲ್ ಗೆದ್ದ ರಾಜಬಾಲ್, ಈ ಜಯದಿಂದ ತನಗೆ ಬಾಲಿವುಡ್ ಚಿತ್ರಗಳ ಪಾತ್ರಗಳಲ್ಲಿ ಅವಕಾಶ ಸಿಗಬಹುದೆಂದು ಆಶಿಸಿದ್ದಾನೆ.

ಡರ್ಬನ್ ಕಿವುಡರಿಗಾಗಿರುವ ಫಲ್ಟನ್ ಶಾಲೆಯ ವಿದ್ಯಾರ್ಥಿಯಾದ ರಾಜಬಾಲ್, ಕಿವುಡರು ಕೂಡ ಪ್ರತಿಭಾನ್ವಿತರೆಂದು ತೋರಿಸಲು ಅವನ ಹೆಸರಿನಲ್ಲಿ ವಿಧವಿಧದ ಟೈಟಲ್‌ಗಳಿರುವುದೇ ಸಾಕ್ಷಿಯೊದಗಿಸುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ