ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಐಎಸ್‌ಐ ವಿರುದ್ಧವೇ ತಿರುಗಿ ಬಿದ್ದ ಉಗ್ರರು: ಡೈಲಿ ಟೈಮ್ಸ್ (ISI | militants | Islamabad | Daily Times | Pakistan)
Feedback Print Bookmark and Share
 
ಪಾಕಿಸ್ತಾನ ನೆಲದಲ್ಲಿ ಉಗ್ರರು ಅಟ್ಟಹಾಸ ಮುಂದುವರಿಸಿರುವ ನಡುವೆಯೇ ಇದೀಗ ಉಗ್ರರು ಪಾಕ್‌ನ ಇಂಟರ್ ಸರ್ವಿಸ್ ಇಂಟೆಲಿಜೆನ್ಸ್(ಐಎಸ್‌ಐ) ವಿರುದ್ಧವೇ ಸಮರ ಸಾರಿರುವುದಾಗಿ ಪ್ರಮುಖ ದೈನಿಕವೊಂದರ ವರದಿ ಭಾನುವಾರ ಬಹಿರಂಗಪಡಿಸಿದೆ.

ಭಾನುವಾರದ ಡೈಲಿ ಟೈಮ್ಸ್ ಸಂಪಾದಕೀಯದಲ್ಲಿ, ಪಾಕಿಸ್ತಾನದಲ್ಲಿ ಈ ಮೊದಲು ಉಗ್ರರಿಗೆ ಐಎಸ್‌ಐ ಕೃಪಾಕಟಾಕ್ಷ ಇರುವುದು ಗಟ್ಟಿನ ವಿಚಾರವಾಗಿ ಉಳಿದಿಲ್ಲ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಉಗ್ರರು ಐಎಸ್‌ಐ ವಿರುದ್ಧವೇ ತಿರುಗಿ ಬಿದ್ದಿರುವುದಾಗಿ ವಿವರಿಸಿದೆ.

ಸ್ವಾತ್ ಮತ್ತು ದಕ್ಷಿಣ ವಜಿರಿಸ್ತಾನದಲ್ಲಿ ಪಾಕಿಸ್ತಾನದ ಭದ್ರತಾ ಪಡೆ,ಪೊಲೀಸರು ಭಯೋತ್ಪಾದಕರನ್ನು ಸದೆ ಬಡಿಯುವಲ್ಲಿ ನಿರತವಾಗಿರುವ ಹಿನ್ನೆಲೆಯಲ್ಲಿ ಉಗ್ರರು ಐಎಸ್‌ಐ ವಿರುದ್ಧ ತಿರುಗಿಬೀಳಲು ಕಾರಣ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.

ಶುಕ್ರವಾರವಷ್ಟೇ ಐಎಸ್‌ಐ‌ನ ಪ್ರಾಂತೀಯ ಕೇಂದ್ರಸ್ಥಾನವನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ಆತ್ಮಹತ್ಯಾ ಕಾರ್ ಬಾಂಬ್ ಸ್ಫೋಟದಲ್ಲಿ 12ಕ್ಕೂ ಹೆಚ್ಚಿನ ಸೈನಿಕರು ಹಾಗೂ ನಾಗರಿಕರು ಬಲಿಯಾಗಿದ್ದರು.

ಸದ್ಯದ ಬೆಳವಣಿಗೆಯಲ್ಲಿ ಗುಪ್ತಚರ ಇಲಾಖೆಗೆ ಇದು ಉತ್ತಮವಾದ ಸಮಯವಲ್ಲ ಎಂದು ಹೇಳಿರುವ ಸಂಪಾದಕೀಯದಲ್ಲಿ, ಉಗ್ರರ ವಿರುದ್ಧದ ಕಾರ್ಯಾಚರಣೆ ಕೂಡ ಯಶಸ್ವಿಗೊಂಡಿಲ್ಲ. ಉಗ್ರರು ಗೆರಿಲ್ಲಾ ಮಾದರಿಯ ಯುದ್ಧದಲ್ಲಿ ಮಿಲಿಟರಿ ಪಡೆಗೆ ಸವಾಲಾಗಿ ಪರಿಣಮಿಸಿದೆ ಎಂದು ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ