ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಲಕಂಡ್: ಶಾಲೆಗಳ ರಕ್ಷಣೆಗೆ ವಿಶೇಷ ಭದ್ರತಾ ದಳ (Malakand | Police | Militants | Pakistan)
Feedback Print Bookmark and Share
 
ಉಗ್ರಗಾಮಿಗಳ ಕೆಂಗಣ್ಣಿಗೆ ಗುರಿಯಾಗಿ ಸುಮಾರು 200 ಶಾಲೆಗಳು ನಾಶವಾಗಿರುವ ಪಾಕಿಸ್ತಾನದ ಮಲಕಂಡ್ ವಿಭಾಗದಲ್ಲಿ ಪೊಲೀಸರಿಂದ ವಿಶೇಷ ಶಾಲಾ ಭದ್ರತಾ ದಳವನ್ನು ಸ್ಥಾಪಿಸಲಾಗಿದೆ. ಶಾಲೆಗಳು, ಕಾಲೇಜುಗಳು ಮತ್ತು ವಿವಿಗಳಿಗೆ ರಕ್ಷಣೆ ನೀಡಲು ನಾವು ಮಲಕಾಂಡ್ ವಿಭಾಗದಲ್ಲಿ ಶಾಲಾ ಭದ್ರತಾ ದಳವನ್ನು ಸ್ಥಾಪಿಸಿದ್ದೇವೆಂದು ಪೊಲೀಸ್ ಡಿಐಜಿ ತಿಳಿಸಿದ್ದಾರೆ.

ದಳಕ್ಕೆ ಇನ್ಸ್‌ಪೆಕ್ಟರ್ ನೇತೃತ್ವ ವಹಿಸಿದ್ದರೆ ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳಾಗಿದ್ದು, ನಾಲ್ವರು ಸಹಾಯಕ ಸಬ್‌ಇನ್ಸ್‌ಪೆಕ್ಟರ್‌ಗಳು ಮತ್ತು ಇತರೆ ಪೊಲೀಸ್ ಸಿಬ್ಬಂದಿ ಸ್ವಾಟ್‌ನಲ್ಲಿ ಶಿಕ್ಷಣ ಸಂಸ್ಥೆಗಳ ಭದ್ರತೆ ಬಗ್ಗೆ ನಿಗಾ ವಹಿಸಿದ್ದಾರೆ.

ಮಲಕಂಡ್ ಪ್ರದೇಶದಲ್ಲಿ ಶಿಕ್ಷಣವು ಭಯೋತ್ಪಾದನೆಗೆ ಪ್ರಮುಖ ಬಲಿಪಶುವಾಗಿದ್ದು, ಭಯೋತ್ಪಾದಕರು ಬಹುತೇಕ ವಿದ್ಯಾರ್ಥಿನಿಯರಿಂದ ಕೂಡಿದ ಸುಮಾರು 200 ಶಾಲೆಗಳನ್ನು ನಾಶಮಾಡಿದ್ದಾರೆ. ಇದರಿಂದ ಶಾಲೆಯ ಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ಕೈಬಿಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ