ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಯ‌ೂಬಾ ನಗರಕ್ಕೆ ಪ್ರಥಮ ಪಂಜಾಬಿ ಸಿಖ್ ಮೇಯರ್ (Yuba | Punjabi | Gill | Mayor)
Feedback Print Bookmark and Share
 
ಅಮೆರಿಕದಲ್ಲಿ ಪ್ರಥಮ ಪಂಜಾಬಿ ಗ್ರಾಮವೆಂದು ಹೆಸರಾದ ಯ‌ೂಬಾ ನಗರವು ಈ ವಾರ ತನ್ನ ಪ್ರಥಮ ಸಿಖ್ ಮೇಯರ್‌ರನ್ನು ಪಡೆದಿದೆ. 44ರ ಪ್ರಾಯದ ಕಾಶ್ ಗಿಲ್ ಅವರು ನಗರದ ಹೊಸ ಮೇಯರ್ ಹುದ್ದೆಗೆ ಪ್ರಮಾಣ ವಚನ ಸ್ವೀಕರಿಸಿದರು.

ನೂರಾರು ಜನರು ಸಮಾರಂಭಕ್ಕೆ ಹಾಜರಿದ್ದರು. ನೆರೆದಿದ್ದ ಜನರು ಸಮೋಸಗಳು, ಚನಾ ಮಸಾಲಾ, ಸಿಹಿತಿಂಡಿಗಳು ಸೇರಿದಂತೆ ಭಾರತದ ತಿನಿಸುಗಳು ಹಾಗೂ ಪಂಜಾಬಿ ಸಂಗೀತದ ರಸದೌತಣ ಸವಿದರು.ಸಿಖ್ಖರು, ಹಿಂದುಗಳು ಮತ್ತು ಮುಸ್ಲಿಮರು ಸೇರಿದಂತೆ 15,000 ಪಂಜಾಬಿಗಳು ಈ ನಗರದಲ್ಲಿದ್ದು ಗಿಲ್ ಕ್ಯಾಲಿಫೋರ್ನಿಯದ ಪ್ರಥಮ ಸಿಖ್ ಮೇಯರ್ ಆಗಿದ್ದಾರೆ.

ನಾವು ಇಂದು ರಾತ್ರಿ ಇತಿಹಾಸ ನಿರ್ಮಿಸಿದ್ದು, ಪ್ರತಿಯೊಬ್ಬರು ಇತಿಹಾಸದ ಭಾಗವಾಗಿದ್ದಾರೆಂದು ಅವರು ಹೇಳಿದರು. ನಾವು ಪಂಜಾಬಿಗಳು ಇಲ್ಲಿ 100ಕ್ಕೂ ಹೆಚ್ಚು ವರ್ಷಗಳಿಂದ ವಾಸಿಸುತ್ತಿದ್ದು, ತಾವು ಮೇಯರ್ ಆಗಿ ಆಯ್ಕೆಯಾಗಿದ್ದು, ಇಡೀನಗರಕ್ಕೆ ಹೆಮ್ಮೆ ತಂದಿದೆಯೆಂದು ಪಂಜಾಬ್ ಸಂಜಾತ ಗಿಲ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಮೆರಿಕ, ಯೂಬಾ, ಮೇಯರ್, ರಸದೌತಣ