ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೂಕಿ ಬಿಡುಗಡೆಗೆ ಅಧ್ಯಕ್ಷ ಒಬಾಮಾ ಒತ್ತಾಯ (Gilani | Obama Suu Kyi, Rhodes)
Feedback Print Bookmark and Share
 
ಬರ್ಮಾದ ಪ್ರತಿಪಕ್ಷದ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಬಿಡುಗಡೆ ಮಾಡುವಂತೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಒತ್ತಾಯಿಸಿದ್ದಾರೆ. ಬರ್ಮದ ಪ್ರಧಾನಮಂತ್ರಿ ಲೆ.ಜನರಲ್ ಥೇನ್ ಸೇನ್ ಜತೆ ಭಾನುವಾರ ಅಭೂತಪೂರ್ವ ಮುಖಾಮುಖಿಯಲ್ಲಿ ಬರ್ಮದ ಆಡಳಿತ ಬಂಧಿಯಾಗಿಸಿದ ಇತರೆ ರಾಜಕೀಯ ಕೈದಿಗಳ ಬಿಡುಗಡೆಗೆ ಒಬಾಮಾ ಆಗ್ರಹಿಸಿದರು.

10 ರಾಷ್ಟ್ರಗಳಿಗೆ ಸೇರಿದ ನಾಯಕರ ಏಸಿಯಾನ್ ಒಕ್ಕೂಟದ ಸಭೆಯ ಸಂದರ್ಭದಲ್ಲಿ ಸೇನ್ ಅವರಿಗೆ ಒಬಾಮಾ ತಮ್ಮ ಸಂದೇಶವನ್ನು ಮುಟ್ಟಿಸಿದ್ದಾರೆ. ಬರ್ಮಾ ಆಡಳಿತಗಾರರ ಜತೆ ಸಭೆಯಲ್ಲಿ ಒಬಾಮಾ ಪ್ರತಿಪಕ್ಷದ ನಾಯಕನನ್ನು ಮತ್ತು ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕೆಂದು ಬರ್ಮಾ ಆಡಳಿತಗಾರರಿಗೆ ಒತ್ತಾಯಿಸಿದರೆಂದು ಶ್ವೇತಭವನದ ವಕ್ತಾರ ಬೆನ್ ರೋಡ್ಸ್ ತಿಳಿಸಿದ್ದಾರೆ.

ಅಮೆರಿಕದ ರಾಜತಾಂತ್ರಿಕರ ಗುಂಪಿಗೆ ಸೂಕಿಯವರ ಭೇಟಿಗೆ ಅವಕಾಶ ನೀಡಿದ ಬಳಿಕ ಕಳೆದ ವಾರ ಸೂಕಿ ಅವರನ್ನು ರಾಜತಾಂತ್ರಿಕರ ಗುಂಪು ಭೇಟಿ ಮಾಡಿದ ಬಳಿಕ ಬೆನ್ನಹಿಂದೆಯೇ ಒಬಾಮಾ ಪ್ರತಿಕ್ರಿಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬರ್ಮಾ, ಸೂಕಿ, ಒಬಾಮಾ, ಏಸಿಯಾನ್