ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಲಾವಿ ಪ್ರತಿಷ್ಠಾನ ಮುಟ್ಟುಗೋಲು: ಇರಾನ್ ಕಿಡಿ (Mosques | Iran | Newyork | Seize)
Feedback Print Bookmark and Share
 
ಇರಾನ್ ಜತೆ ನಂಟು ಹೊಂದಿದ ಆರೋಪದಮೇಲೆ ಅಮೆರಿಕದಲ್ಲಿರುವ ನಾಲ್ಕು ಮಸೀದಿಗಳು ಮತ್ತು ನ್ಯೂಯಾರ್ಕ್ ನಗರದ ಮುಸ್ಲಿಂ ಲಾಭೇತರ ಸಂಘಟನೆ ಮಾಲೀಕತ್ವದ ಸಂಸ್ಥೆಯನ್ನು ಸ್ವಾಧೀನಕ್ಕೆ ತೆಗೆದುಕೊಂಡ ಅಮೆರಿಕ ಕ್ರಮವನ್ನು ಇರಾನ್ ಅಪಮಾನವೆಂದು ಹೇಳಿದೆ.

ಈ ಕ್ರಮದಿಂದ ಅಧ್ಯಕ್ಷ ಬರಾಕ್ ಒಬಾಮಾ ಅವರ ಪರಿವರ್ತನೆಯ ಘೋಷಣೆಯು ಬರೀ ಬೂಟಾಟಿಕೆ ಮತ್ತು ಮಾಜಿ ಅಧ್ಯಕ್ಷ ಬುಷ್‌ಗಿಂತ ಅವರು ಭಿನ್ನವಾಗಿಲ್ಲವೆಂದು ತೋರಿಸುತ್ತದೆಂದು ಆಲಿ ಲಾರಿಂಜಾನಿ ತಿಳಿಸಿದ್ದಾರೆ. ಇರಾನ್ ವಿರುದ್ಧ ಇನ್ನೊಂದು ವರ್ಷ ನಿರ್ಬಂಧ ಮತ್ತು ದಿಗ್ಭಂಧನ ವಿಸ್ತರಿಸಿದ ಕ್ರಮ ಮತ್ತು ಅಮೆರಿಕದ ಅಲಾವಿ ಪ್ರತಿಷ್ಠಾನದ ಆಸ್ತಿಪಾಸ್ತಿ ಮತ್ತು ಲೆಕ್ಕಪತ್ರಗಳ ಸ್ಥಗಿತ ನಿಜವಾಗಲೂ ಅಪಮಾನವೆಂದು ಅವರು ಸಂಸತ್ತಿನಲ್ಲಿ ಹೇಳಿದರು.

ಒಂದು ವರ್ಷ ಕಾಲದ ಖಾಲಿ ಭಾಷಣಗಳು ಮತ್ತು ಘೋಷಣೆಗಳಿಂದ ಈ ಅಧ್ಯಕ್ಷರ ನಡವಳಿಕೆಯು ಅವರ ಪೂರ್ವಾಧಿಕಾರಿಗಿಂತ ವ್ಯತ್ಯಾಸವಿಲ್ಲವೆಂದು ತೋರಿಸುತ್ತದೆಂದು ಲಾರಿಂಜಾನಿ ರೇಡಿಯೊದಲ್ಲಿ ಪ್ರಸಾರವಾದ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.ಅಮೆರಿಕದ ಪ್ರಾಸಿಕ್ಯೂಟರ್‌ಗಳು ಅಲಾವಿ ಪ್ರತಿಷ್ಠಾನದ ವಿರುದ್ಧ ಫೆಡರಲ್ ಕೋರ್ಟ್‌ನಲ್ಲಿ ನಾಗರಿಕ ದೂರನ್ನು ಸಲ್ಲಿಸಿದ್ದು, ಸುಮಾರು 500 ದಶಲಕ್ಷ ಅಮೆರಿಕನ್ ಡಾಲರ್ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೋರಿದೆ.
ಸಂಬಂಧಿತ ಮಾಹಿತಿ ಹುಡುಕಿ