ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರಾನಾ ದೋಷಾರೋಪಕ್ಕೆ ಸಮಯ ವಿಸ್ತರಣೆ ಕೋರಿಕೆ (Rana | FBI | LeT| India)
Feedback Print Bookmark and Share
 
ಭಾರತದಲ್ಲಿ ಲಷ್ಕರೆ ತೊಯ್ಬಾ ಭಯೋತ್ಪಾದನೆ ಸಂಚಿನಲ್ಲಿ ಆರೋಪಿಯಾದ ತಹಾವುರ್ ರಾನಾ ವಿರುದ್ಧ ದೋಷಾರೋಪ ಹೊರಿಸಲು ಕಾಲಾವಕಾಶವನ್ನು ಜ.14ರವರೆಗೆ 60 ದಿನಗಳ ಕಾಲ ವಿಸ್ತರಿಸಬೇಕೆಂದು ಅಮೆರಿಕ ಪ್ರಾಸಿಕ್ಯೂಟರ್‌ಗಳು ಕೋರಿದ್ದಾರೆ.

ಇತ್ತೀಚಿನ ದಾಳಿಗಳಲ್ಲಿ ಅವನ ವಿರುದ್ಧ ಬಯಲಾದ ಹೊಸ ಸಾಕ್ಷ್ಯಾಧಾರಗಳ ಪರಿಶೀಲನೆಗೆ ಎಫ್‌ಬಿಐಗೆ ಹೆಚ್ಚಿನ ಕಾಲಾವಕಾಶ ಅಗತ್ಯವಾಗಿದೆಯೆಂದು ಅವರು ಹೇಳಿದ್ದಾರೆ. ಎಫ್‌ಬಿಐ ಮೊಹರಾದ ಲಕೋಟೆಯಲ್ಲಿ ರಾನಾ ವಿರುದ್ಧ ಹೊಸ ಸಾಕ್ಷ್ಯಾಧಾರಗಳ ಕಂತೆಯನ್ನು ಸಲ್ಲಿಸಿದ್ದು, ಮೊಹರನ್ನು ತೆಗೆಯದಂತೆ ಚಿಕಾಗೊ ಕೋರ್ಟ್ ನ್ಯಾಯಾಧೀಶರಿಗೆ ತಿಳಿಸಿದೆ.

ಅಮೆರಿಕ ಜಿಲ್ಲಾ ಕೋರ್ಟ್‌ನಲ್ಲಿ ರಾನಾ ವಿರುದ್ಧ ದೋಷಾರೋಪ ಹೊರಿಸಲು ನ.19ರಿಂದ ಜನವರಿ 14ಕ್ಕೆ ವಿಸ್ತರಿಸಲು ಕಾಲಾವಕಾಶ ಕೋರಿ ಅಮೆರಿಕದ ಅಟಾರ್ನಿ ಪಾಟ್ರಿಕ್ ಫಿಡ್ಸ್‌ಗೆರಾಲ್ಡ್ ಮುಖ್ಯ ನ್ಯಾಯಾಧೀಶರ ಮುಂದೆ ಮಂಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾನಾ, ಎಫ್ಬಿಐ, ಚಿಕಾಗೊ, ದೋಷಾರೋಪ