ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭ್ರಷ್ಟಾಚಾರ, ಅನೈತಿಕತೆಗೆ ನಂಟು ಕಲ್ಪಿಸಿದ ಚೀನಾ (Beijing | Hostess | Corruption China)
Feedback Print Bookmark and Share
 
ಪ್ರೇಯಸಿಯರಿದ್ದರೆ ಅವರನ್ನು ತ್ಯಜಿಸಿ, ಮಹಿಳಾ ಸಿಬ್ಬಂದಿಯ ಬಾರ್‌ಗಳಿಗೆ ಹೋಗಬೇಡಿ ಮತ್ತು ದುಂದುವೆಚ್ಚವನ್ನು ತಪ್ಪಿಸಿ ಇವು ಚೀನಾ ಅಧಿಕಾರಿಗಳಿಗೆ ಕಮ್ಯುನಿಸ್ಟ್ ಸರ್ಕಾರ ಕಟ್ಟುನಿಟ್ಟಾಗಿ ನೀಡಿದ ಆದೇಶಗಳು. ಆಡಳಿತಕ್ಕೆ ಕಪ್ಪುಚುಕ್ಕೆಯಾಗಿ ತಮ್ಮ ದೇಶದ ಖ್ಯಾತಿಗೆ ಕಳಂಕ ತರುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಪ್ರಯತ್ನದ ಭಾಗವಾಗಿ ಚೀನಾ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ.

ಅಸಂಖ್ಯಾತ ಅಭಿಯಾನಗಳಲ್ಲಿ ಒಂದಾದ ಹೊಸ ನೈತಿಕತೆಯ ಭಾಷೆಯಲ್ಲಿ, ಅನೈತಿಕತೆ ಮತ್ತು ಭ್ರಷ್ಟಾಚಾರದ ನಡುವೆ ಸ್ಪಷ್ಟ ನಂಟಿದೆಯೆಂದು ಆಡಳಿತಶಾಹಿಗೆ ಮನದಟ್ಟು ಮಾಡಿದ್ದಾರೆ.ಒಬ್ಬ ಸಂಖ್ಯಾಶಾಸ್ತ್ರಜ್ಞ ಆಡಳಿತಶಾಹಿಗೆ ಇತ್ತೀಚೆಗೆ ಮಾಡಿದ ಭಾಷಣದಲ್ಲಿ ಕೆಲವು ಅಧಿಕಾರಿಗಳಲ್ಲಿ ಭ್ರಷ್ಟಾಚಾರ ಕುರಿತು ತನಿಖೆ ಮಾಡಿದಾಗ, ಶೇ.95ರಷ್ಟು ಅಧಿಕಾರಿಗಳು ಪ್ರೇಯಸಿಯರನ್ನು ಇಟ್ಟುಕೊಂಡಿದ್ದು ಬೆಳಕಿಗೆ ಬಂದಿದೆಯೆಂದು ಹೇಳಿದ್ದಾರೆ.

'ಕೇವಲ ನಿಮ್ಮ ವೇತನವೊಂದರಲ್ಲೇ ನೀವು ಪ್ರೇಯಸಿಯನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಇಂತಹ ಐಷಾರಾಮಿ ಜೀವನಶೈಲಿಗೆ ದೊಡ್ಡ ಮೊತ್ತದ ನಗದುಹಣ ಬೇಕಾಗುತ್ತದೆಂದು' ಪಕ್ಷದಲ್ಲಿ ಶಿಸ್ತನ್ನು ಜಾರಿಗೆ ತರುವ ಅಧಿಕಾರಿ ಅಧಿಕಾರಿಗಳಿಗೆ ಹೇಳಿದ್ದಾರೆ. ನಿಮ್ಮ ಬಳಿ ಹಣವಿಲ್ಲದಿದ್ದರೆ ಏನು ಮಾಡುತ್ತೀರಿ? ಸಹಜವಾಗಿ ನಿಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಹೆಚ್ಚಿನ ಹಣ ಸಂಪಾದಿಸುತ್ತೀರಿ ಎಂದು ಕಿ ಹೇಳಿದ್ದಾಗಿ ರಾಜಮಾಧ್ಯಮದ ಪ್ರಸಾರ ತಿಳಿಸಿದೆ
ಸಂಬಂಧಿತ ಮಾಹಿತಿ ಹುಡುಕಿ