ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಲ್ ಖಾಯಿದಾ ವಿರೋಧಿ ಆದಿವಾಸಿಗಳ ಹತ್ಯೆ (Al-Qaeda | Iraq | Bagdad | America)
Feedback Print Bookmark and Share
 
ಇರಾಕಿ ಸೇನಾ ಧಿರಿಸಿನಲ್ಲಿದ್ದ ಶಸ್ತ್ರಧಾರಿಯೊಬ್ಬ ಆಲ್‌ಖೈದಾ ವಿರೋಧಿ ಪ್ರತಿಜ್ಞೆ ಕೈಗೊಂಡಿದ್ದ 13 ಮಂದಿ ಆದಿವಾಸಿಗಳನ್ನು ಗುಂಡಿಕ್ಕಿ ಕೊಂದ ಘಟನೆ ಪಶ್ಚಿಮ ಬಾಗ್ದಾದ್ ಸೀಡನ್ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಬಾಗ್ದಾದ್‌ನಿಂದ 20 ಕಿ.ಮೀ ದೂರದಲ್ಲಿರುವ ಈ ಗ್ರಾಮಕ್ಕೆ ಮುಸ್ಸಂಜೆ ವೇಳೆ ನುಗ್ಗಿದ ಈತ ಆರು ಮಂದಿ ಗ್ರಾಮಸ್ಥರನ್ನು ಮನೆಯಿಂದ ಹೊರಗೆ ನಿಲ್ಲಿಸಿ ಗುಂಡಿಕ್ಕಿದ ಎಂದು ಗ್ರಾಮಸ್ಥ ಮಹಮ್ಮದ್ ಅಲ್-ಜುಬೈ ತಿಳಿಸಿದ್ದಾನೆ.

ಆನಂತರ ಶಾವಾ ಆಂದೋಲನದ ಮುಖಂಡನ ಮನೆಯೊಳಗೆ ನುಗ್ಗಿ ಅವರ ಮೂವರು ಮಕ್ಕಳು ಮತ್ತು ನಾಲ್ವರು ಸಂಬಂಧಿಕರನ್ನು ಸಹ ಗುಂಡಿಕ್ಕಿ ಕೊಂದಿದ್ದಾನೆ. ಸಾವನ್ನಪ್ಪಿದವರು ಜುಬಾ ಆದಿವಾಸಿ ಪಂಗಡಕ್ಕೆ ಸೇರಿದವರಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ