ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನ್ ಉಗ್ರರಿಗೆ ಪಾಕ್ ಆಶ್ರಯ: ಅಶ್ರಫ್ (Taliban | Pakistan | India | Gilani | zardari)
Feedback Print Bookmark and Share
 
ತಾಲಿಬಾನ್ ಉಗ್ರರನ್ನು ಸೃಷ್ಟಿಸಿದ ಪಾಕಿಸ್ತಾನವು ಇದೀಗ ತನ್ನದೇ ದೇಶದಲ್ಲಿ ಅವರಿಗೆ ಆಶ್ರಯ ನೀಡಿದೆ ಎಂದು ಆಫ್ಘಾನಿಸ್ತಾನದ ರಾಜತಾಂತ್ರಿಕ ಅಶ್ರಫ್ ಹೈದರಿ ನೇರವಾಗಿ ಆರೋಪ ಮಾಡಿದ್ದಾರೆ.

ಆಫ್ಘಾನಿಸ್ತಾನದಲ್ಲಿ ತಾಲಿಬಾನಿ ಉಗ್ರರನ್ನು ಸದೆಬಡಿಯಲು ಅಮೆರಿಕ ನೇತೃತ್ವದ ರಕ್ಷಣಾ ಪಡೆಗಳನ್ನು ಮತ್ತಷ್ಟು ಬಲಪಡಿಸಬೇಕಾಗಿದೆ. ಅಫ್ಘಾನಿಸ್ತಾನದ ಸೇನೆ ಮತ್ತು ಪೊಲೀಸ್ ಪಡೆಯನ್ನು ವೃತ್ತಿನಿರತರನ್ನಾಗಿ ಸಜ್ಜುಗೊಳಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ತಾಲಿಬಾನಿ ಉಗ್ರರನ್ನು ಇನ್ನು ಸಹಿಸಲು ಸಾಧ್ಯವಿಲ್ಲ. ಅವರು ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದಾರೆ ಎಂಬುದು ಎಲ್ಲರಿಗೂ ಈಗ ಸ್ಫುಟವಾಗಿ ಗೊತ್ತಾಗಿದೆ. ಪಾಕಿಸ್ತಾನವು 1990ರಲ್ಲಿ ಆಫ್ಘಾನಿಸ್ತಾನದಲ್ಲಿ ತಾಲಿಬಾನಿ ಉಗ್ರರನ್ನು ಹುಟ್ಟುಹಾಕಿತು ಎಂದು ರಾಜತಾಂತ್ರಿಕ ಅವರು ಎಮೋರಿ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.

ಸೆಪ್ಟೆಂಬರ್ 11ರ ಘಟನೆಯ ನಂತರ ಅಮೆರಿಕದಲ್ಲಿ ಬುಷ್ ಅಧಿಕಾರವಧಿಯಲ್ಲಿನ ಒತ್ತಡದ ಕಾರಣ ತಾಲಿಬಾನ್ ವಿರುದ್ಧ ಪಾಕಿಸ್ತಾನ ತಿರುಗಿಬಿತ್ತು. ಆದರೂ ಪಾಕಿಸ್ತಾನದಲ್ಲಿ ಮತ್ತೇ ತಾಲಿಬಾನಿಗಳು ಪುನರ್ ಸಂಘಟನೆಗೊಳ್ಳುತ್ತಿದ್ದಾರೆ. ಅವರಿಗೆ ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ