ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿದೇಶಿ ಒತ್ತಡಗಳಿಂದ ಪ್ರೇರಿತವಾಗಿಲ್ಲ: ಪಾಕಿಸ್ತಾನ (Pakistan | United States | Qureshi | Islamabad)
Feedback Print Bookmark and Share
 
ಭಯೋತ್ಪಾದಕತೆಯನ್ನು ಸೋಲಿಸುವ ಸಮಾನ ಉದ್ದೇಶವನ್ನು ಪಾಕಿಸ್ತಾನ ಮತ್ತು ಅಮೆರಿಕ ಹಂಚಿಕೊಂಡಿದ್ದರೂ, ಪಾಕಿಸ್ತಾನ ಮಿಲಿಟರಿ ಕಾರ್ಯಾಚರಣೆಗೆ ಬಾಹ್ಯಶಕ್ತಿಗಳಿಂದ ಪ್ರಚೋದನೆ ಪಡೆಯುವುದಿಲ್ಲ ಎಂದು ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ ಸೋಮವಾರ ತಿಳಿಸಿದ್ದಾರೆ. ಬೇರಾವುದೇ ಶಕ್ತಿಗಳಿಂದ ಪ್ರಚೋದನೆ ಪಡೆದು ನಾವು ಏನನ್ನೂ ಮಾಡುವುದಿಲ್ಲ.

ಪಾಕಿಸ್ತಾನದ ಅಗತ್ಯಗಳು ಮತ್ತು ಆದ್ಯತೆಗಳೇನೆಂದು ನಾವು ನೋಡುತ್ತೇವೆ ಎಂದು ಖುರೇಷಿ ವರದಿಗಾರರಿಗೆ ತಿಳಿಸಿದರು. ತಾಲಿಬಾನ್ ಮತ್ತು ಅಲ್ ಖಾಯಿದಾ ಉಗ್ರಗಾಮಿಗಳ ವಿರುದ್ಧ ಹೋರಾಟ ವಿಸ್ತರಣೆಗೆ ಅಮೆರಿಕ ಒತ್ತಡ ಹೆಚ್ಚಿಸಿದೆಯೆಂಬ ನ್ಯೂಯಾರ್ಕ್ ಟೈಮ್ಸ್ ವರದಿ ಕುರಿತು ಅವರು ಪ್ರತಿಕ್ರಿಯಿಸುತ್ತಿದ್ದರು.

ದಕ್ಷಿಣ ವಜಿರಿಸ್ತಾನ ನೆಲೆಯಲ್ಲಿ ಪಾಕಿಸ್ತಾನ ಸೇನೆಯು ಪಾಕಿಸ್ತಾನದ ತಾಲಿಬಾನ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದು, ಉಗ್ರಗಾಮಿಗಳು ಬಾಂಬ್ ದಾಳಿಗಳ ಮ‌ೂಲಕ ಪ್ರತಿದಾಳಿ ನಡೆಸಿದ್ದಾರೆ. ಆಫ್ಘಾನಿಸ್ತಾನದಲ್ಲಿ ಭದ್ರತೆ ಕುಸಿತವನ್ನು ತಡೆಯುವುದು ಹೇಗೆಂದು ಅಮೆರಿಕ ಆಯ್ಕೆಗಳನ್ನು ಚಿಂತಿಸುತ್ತಿರುವ ನಡುವೆ, ಪಾಕ್ ಕಾರ್ಯಾಚರಣೆಯನ್ನು ಸ್ವಾಗತಿಸಿದ್ದು, ಪಾಕಿಸ್ತಾನವು ಆಫ್ಘನ್ ತಾಲಿಬಾನ್ ಬಣಗಳನ್ನು ಸ್ವತಃ ನಿಭಾಯಿಸುವುದನ್ನು ಕಾಣಲು ಆಸಕ್ತಿ ಹೊಂದಿದೆ.

40,000 ಹೆಚ್ಚುವರಿ ಪಡೆಗಳನ್ನು ಆಫ್ಘಾನಿಸ್ತಾನಕ್ಕೆ ಕಳಿಸುವ ಸಮಗ್ರ ಕಾರ್ಯತಂತ್ರವನ್ನು ಮುಂದಿನ ವಾರಗಳಲ್ಲಿ ಅಮೆರಿಕ ಅಧ್ಯಕ್ಷ ಒಬಾಮಾ ಪ್ರಕಟಿಸುವ ನಿರೀಕ್ಷೆಯಿದೆ.
ಸಂಬಂಧಿತ ಮಾಹಿತಿ ಹುಡುಕಿ