ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಡಿಐಜಿ ಕಚೇರಿ ಬಳಿ ಬಾಂಬ್ ಸ್ಫೋಟಕ್ಕೆ 2 ಬಲಿ (Bomb | DIG office | Quetta | Blast)
Feedback Print Bookmark and Share
 
ಕ್ವೆಟ್ಟಾದ ಸ್ಪಿನ್ನಿ ರಸ್ತೆಯ ಡಿಐಜಿ ಕಚೇರಿ ಬಳಿ ಬಾಂಬೊಂದು ಸ್ಫೋಟಿಸಿದ್ದು, ಕನಿಷ್ಠ ಇಬ್ಬರು ಸತ್ತಿದ್ದಾರೆ ಮತ್ತು 7 ಮಂದಿ ಗಾಯಗೊಂಡಿದ್ದಾರೆ. ಕಾರ್ಯಾಚರಣೆ ಡಿಐಜಿ ನಿಜಾಂ ಶಾಹಿದ್ ದುರಾನಿಗೆ ಗುರಿಯಿರಿಸಿ ಸ್ಫೋಟ ನಡೆಸಲಾಗಿದ್ದು, ದಾಳಿಯಲ್ಲಿ ಅವರು ಗಾಯಗೊಂಡಿದ್ದಾರೆ. ದುರಾನಿ ಅವರನ್ನು ಸಂಯುಕ್ತ ಮಿಲಿಟರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಚಾಲಕನಿಗೆ ಕೂಡ ದಾಳಿಯಲ್ಲಿ ಗಾಯವಾಗಿದೆ.

ಸ್ಫೋಟದ ಸ್ವರೂಪವನ್ನು ನಿರ್ಧರಿಸಲು ಪೊಲೀಸರು ಏತನ್ಮಧ್ಯೆ ಪ್ರಯತ್ನಿಸುತ್ತಿದ್ದಾರೆ. ಬಾಂಬ್ ಸ್ಫೋಟದ ಬಳಿಕ ವೈಮಾನಿಕ ಗುಂಡಿನ ದಾಳಿ ಕೂಡ ನಡೆದಿದೆಯೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಪಾಕಿಸ್ತಾನದ ಎಲ್ಲ ಪ್ರಮುಖ ನಗರಗಳು ಭಯೋತ್ಪಾದಕರ ರೆಡಾರ್ ವ್ಯಾಪ್ತಿಯಲ್ಲಿದ್ದು, ಪೇಶಾವರವು ಭೀಕರ ಆತ್ಮಾಹುತಿ ದಾಳಿಗಳಿಗೆ ಬಲಿಯಾಗಿದೆ. ವಾಯವ್ಯ ಮುಂಚೂಣಿ ಪ್ರಾಂತ್ಯ ಕೂಡ ಉಗ್ರಗಾಮಿಗಳಿಂದ ಆಗಾಗ್ಗೆ ದಾಳಿಗಳಿಗೆ ಗುರಿಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ