ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಟಿಬೆಟ್ ಚೀನಾದ ಭಾಗವೆಂದು ಒಪ್ಪಿಕೊಂಡ ಒಬಾಮಾ (Obama | China | Hu | Tibet | US)
Feedback Print Bookmark and Share
 
ಟಿಬೆಟ್ ಚೀನಾದ ಭಾಗವಾಗಿದೆಯೆಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಬಣ್ಣಿಸಿದ್ದು, ಬೀಜಿಂಗ್ ಮತ್ತು ಟಿಬೆಟ್ ಧಾರ್ಮಿಕ ಗುರು ದಲೈಲಾಮಾ ಪ್ರತಿನಿಧಿಗಳ ಜತೆ ಮಾತುಕತೆ ಶೀಘ್ರ ಆರಂಭಕ್ಕೆ ಅವರು ಬೆಂಬಲಿಸಿದ್ದಾರೆ. ಚೀನದ ಸಹಯೋಗಿ ಹು ಜಿಂಟಾವೊ ಜತೆ ಬೀಜಿಂಗ್‌ನಲ್ಲಿ ಮಾತುಕತೆ ನಡೆಸಿದ ಒಬಾಮಾ, ಚೀನಾ ಜತೆ ಸಮಗ್ರ, ಸಹಕಾರಿ ಮತ್ತು ಸಕಾರಾತ್ಮಕ ಬಾಂಧವ್ಯಕ್ಕೆ ಪ್ರತಿಜ್ಞೆ ಮಾಡಿದರು.

ಟಿಬೆಟ್ ಚೀನಾದ ಅವಿಭಾಜ್ಯ ಅಂಗವೆಂದು ತಾವು ಗುರುತಿಸಿದ್ದು, ದಲೈಲಾಮಾ ಪ್ರತಿನಿಧಿ ಮತ್ತು ಬೀಜಿಂಗ್ ನಡುವೆ ಶೀಘ್ರವೇ ಮಾತುಕತೆ ಆರಂಭಕ್ಕೆ ಅಮೆರಿಕ ಬೆಂಬಲಿಸುವುದಾಗಿ ಚೀನಾದ ಹು ಜಿಂಟಾವೊ ಜತೆ ಮಾತುಕತೆ ಬಳಿಕ ಒಬಾಮಾ ಹೇಳಿದರು. ಎಲ್ಲ ಅಲ್ಪಸಂಖ್ಯಾತರು ಮಾನವ ಹಕ್ಕುಗಳಿಗೆ ಅರ್ಹರಾಗಿರುತ್ತಾರೆಂದು ತಿಳಿಸಿದ ಒಬಾಮಾ, ದಲೈಲಾಮಾ ಪ್ರತಿನಿಧಿಗಳ ಜತೆ ಮಾತುಕತೆ ನಡೆಸುವಂತೆ ಚೀನಾಗೆ ಒತ್ತಾಯಿಸಿದರು.

ಉಭಯ ನಾಯಕರು ಚೀನಾ, ಅಮೆರಿಕ ನಡುವೆ ಬೆಳೆಯುತ್ತಿರುವ ಸಂಬಂಧವನ್ನು ದಿಟ್ಟ ಪದಗಳಲ್ಲಿ ಹೇಳಿದರು. ಆರ್ಥಿಕತೆ, ಹವಾಮಾನ ಬದಲಾವಣೆ, ಇಂಧನ ಕುರಿತು ಸಹಕಾರವನ್ನು ಪುನರುಚ್ಚರಿಸಿದರು ಮತ್ತು ಇರಾನ್ ಮತ್ತು ಉತ್ತರಕೊರಿಯದ ಅಣ್ವಸ್ತ್ರ ಬೆದರಿಕೆಗಳ ಬಗ್ಗೆ ಚರ್ಚಿಸಿದರು.

ಕಮ್ಯುನಿಸ್ಟ್ ರಾಷ್ಟ್ರಕ್ಕೆ ಚೊಚ್ಚಲ ಭೇಟಿ ನೀಡಿರುವ ಒಬಾಮಾ, ಇರಾನ್ ತನ್ನ ಪರಮಾಣು ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮುಕ್ತತೆ ತೋರಿಸಲು ವಿಫಲವಾದರೆ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆಂದು ಎಚ್ಚರಿಸಿದ್ದಾರೆ.ಇರಾನ್‌‌ಗೆ ಅಣ್ವಸ್ತ್ರದ ಶಾಂತಿಯುತ ಉದ್ದೇಶಗಳನ್ನು ಪ್ರದರ್ಶಿಸಲು ಅವಕಾಶ ಸಿಕ್ಕಿದೆ.

ಅದು ಈ ಅವಕಾಶ ಬಳಕೆಗೆ ವಿಫಲವಾದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆಂದು ಒಬಾಮಾ ಎಚ್ಚರಿಸಿದ್ದಾರೆ. ಉತ್ತರ ಕೊರಿಯದ ಅಣ್ವಸ್ತ್ರ ಕಾರ್ಯಕ್ರಮ ಕುರಿತು, 6 ರಾಷ್ಟ್ರಗಳ ನಡುವೆ ಮಾತುಕತೆ ಪ್ರಕ್ರಿಯೆ ಸಾಧ್ಯವಾದಷ್ಟು ಬೇಗ ಆರಂಭವಾಗಬೇಕೆಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಟಿಬೆಟ್, ಒಬಾಮಾ, ಬೀಜಿಂಗ್, ಟಿಬೆಟ್