ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಝಾನ್ಸಿ ರಾಣಿ ಡಾಲ್‌ಹೌಸಿಗೆ ಬರೆದ ಪತ್ರ ಪತ್ತೆ (London | Lakshmibai | Dalhousie | Bowring)
Feedback Print Bookmark and Share
 
ಝಾನ್ಸಿ ರಾಣಿ ಲಕ್ಷ್ಮಿಬಾಯಿ ಪರ್ಶಿಯನ್ ಭಾಷೆಯಲ್ಲಿ ಆಗಿನ ಈಸ್ಟ್ ಇಂಡಿಯ ಕಂಪೆನಿಯ ಗವರ್ನರ್ ಜನರಲ್ ಲಾರ್ಡ್ ಡಾಲ್‌ಹೌಸಿಗೆ ಬರೆದಿರುವ ಪತ್ರವೊಂದು ಬ್ರಿಟನ್ ಗ್ರಂಥಾಲಯದಲ್ಲಿ ಪತ್ತೆಯಾಗಿದೆ. 1857ರಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಥಮ ಯುದ್ಧ ನಡೆಯುವುದಕ್ಕೆ ಸ್ವಲ್ಪ ಮುಂಚೆ ಈ ಪತ್ರವನ್ನು ಬರೆಯಲಾಗಿತ್ತು.

ಈ ಪತ್ರವು ಬೌರಿಂಗ್ ಕಲೆಕ್ಷನ್ ಎಂದು ಹೆಸರಾದ ದಾಖಲೆಗಳ ಸಂಗ್ರಹದ ಭಾಗವಾಗಿದೆಯೆಂದು ಪ್ರಸಕ್ತ ಲಂಡನ್‌ನಲ್ಲಿ ನಡೆಯುತ್ತಿರುವ ವಿಕ್ಟೋರಿಯ ಮತ್ತು ಆಲ್ಬರ್ಟ್ ಮ‌್ಯೂಸಿಯಂನ ಮಹಾರಾಜಾ ಪ್ರದರ್ಶನದ ಸಂಶೋಧಕ ನಿರ್ವಾಹಕಿ ದೀಪಿಕಾ ಅಹ್ಲಾವತ್ ತಿಳಿಸಿದ್ದಾರೆ.

ಈ ಸಂಗ್ರಹವು ಲೆವಿನ್ ಬೆಂಥಾಮ್ ಬೌರಿಂಗ್ ಹೆಸರಿನಲ್ಲಿದ್ದು, ಮಹಾರಾಜರಿಗೆ ಸಂಬಂಧಿಸಿದ ದಾಖಲೆಗಳು, ಛಾಯಾಚಿತ್ರಗಳ ಗಮನಾರ್ಹ ಸಂಗ್ರಹವನ್ನು ಬೌರಿಂಗ್ ಒಟ್ಟುಗೂಡಿಸಿದ್ದರೆಂದು ಅವರು ಹೇಳಿದ್ದಾರೆ. ಪತ್ರದಲ್ಲಿ ಝಾನ್ಸಿ ರಾಣಿಯು ತಮ್ಮ ಪತಿ ಮೃತಪಟ್ಟ ದಿನದ ದುರದೃಷ್ಟಕರ ಘಟನೆಗಳನ್ನು ಪತ್ರದಲ್ಲಿ ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ