ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶಸ್ತ್ರಕ್ರಿಯೆಯಿಂದ ಪ್ರತ್ಯೇಕಗೊಂಡ ಬಾಂಗ್ಲಾ ಅವಳಿಗಳು (Surgeon | Twins | Melbourne | Separate)
Feedback Print Bookmark and Share
 
ಬಾಂಗ್ಲಾದೇಶದಲ್ಲಿ ತಲೆಯಲ್ಲಿ ಒಂದಕ್ಕೊಂದು ಅಂಟಿಕೊಂಡ ಅವಳಿಗಳಾದ ಕೃಷ್ಣ ಮತ್ತು ತ್ರಿಷ್ಣಾ ಅವರಿಗೆ ಆಸ್ಟ್ರೇಲಿಯದ ಸರ್ಜನ್‌ಗಳು ಶಸ್ತ್ರಕ್ರಿಯೆ ನಡೆಸಿ ಅವರಿಬ್ಬರನ್ನು ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ. ಮೆಲ್ಬೋರ್ನ್ ರಾಯಲ್ ಚಿಲ್ಡ್ರನ್ಸ್ ಆಸ್ಪತ್ರೆಯಲ್ಲಿ ಬಾಲಕಿಯರನ್ನು ಬೇರ್ಪಡಿಸಲು 16 ಶಸ್ತ್ರಚಿಕಿತ್ಸಕರು ಮತ್ತು ಶುಶ್ರೂಷಕಿಯರು ಶಸ್ತ್ರಕ್ರಿಯೆ ಆರಂಭಿಸಿದರು.

ಮಕ್ಕಳ ಫಸ್ಟ್ ಫೌಂಡೇಶನ್ ಟ್ರಸ್ಟ್ ಕಳೆದ ವರ್ಷ ಜನವರಿಯಲ್ಲಿ ಆಸ್ಟ್ರೇಲಿಯಕ್ಕೆ ಈ ಮಕ್ಕಳನ್ನು ಕರೆತಂದಿದ್ದರು. ಸ್ಥಳೀಯ ಕಾಲಮಾನ ಬೆಳಿಗ್ಗೆ 11 ಗಂಟೆಗೆ ಬಾಲಕಿಯರನ್ನು ಬೇರ್ಪಡಿಸಲಾಗಿದೆ. ತಲೆಯಲ್ಲಿ ಒಂದಕ್ಕೊಂದು ಅಂಟಿಕೊಂಡಿದ್ದ ಮಕ್ಕಳನ್ನು ಪ್ರತ್ಯೇಕವಾಗಿ ನೋಡುವುದು ವಿಶೇಷವಾಗಿ ಕಾಣುತ್ತದೆಂದು ಆಸ್ಪತ್ರೆಯ ವಕ್ತಾರ ಡೊನಾನ್ ತಿಳಿಸಿದ್ದಾರೆ.

ಬಾಲಕಿಯರನ್ನು ಕೆಲವು ದಿನಗಳವರೆಗೆ ಅರಿವಳಿಕೆ ನೀಡಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರಿಸಲಾಗಿದ್ದು, ನಿಧಾನವಾಗಿ ಅವರನ್ನು ಎಚ್ಚರಿಸಲಾಗುವುದು. ಈಗ ನಾವು ಪುನರ್ನಿರ್ಮಾಣದ ಶಸ್ತ್ರಚಿಕಿತ್ಸೆ ನಡೆಸಬೇಕಾಗಿದ್ದು, ಅನೇಕ ಗಂಟೆಗಳ ಕಾಲ ನಡೆಯಲಿದೆಯೆಂದು ಮತ್ತು ಅದು ಎಷ್ಟು ಸಮಯ ತೆಗೆದುಕೊಳ್ಳುತ್ತದೆಂದು ಹೇಳಲಾಗದು ಎಂದು ಆಸ್ಪತ್ರೆಯ ವಕ್ತಾರ ತಿಳಿಸಿದರು. ಪ್ಲಾಸ್ಟಿಕ್ ಸರ್ಜನ್‌ಗಳು ಬಾಲಕಿಯರ ತಲೆಬುರುಡೆಯನ್ನು ಮ‌ೂಳೆ ಮತ್ತು ಚರ್ಮದಿಂದ ಸೋಂಕು ತಗುಲದಂತೆ ಮುಚ್ಚಲಿದ್ದು, ತ್ರಿಷ್ಣಾ ಮತ್ತು ಕೃಷ್ಣಾ ಅವರು ಅನೇಕ ದಿನಗಳವರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿರುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ