ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚಕ್ರವರ್ತಿಗೆ ಪೂರ್ಣ ತಲೆಬಾಗಿಸಿದ ಒಬಾಮಾಗೆ ಟೀಕೆ (Obama | Tokyo | Akihito | Michiko)
Feedback Print Bookmark and Share
 
ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಟೊಕಿಯೊಗೆ ವಾರಾಂತ್ಯದಲ್ಲಿ ನೀಡಿದ ಭೇಟಿ ಸಂದರ್ಭದಲ್ಲಿ ಜಪಾನಿನ ಚಕ್ರವರ್ತಿಗೆ ಪೂರ್ಣವಾಗಿ ತಲೆಬಾಗಿ ವಂದಿಸಿದ್ದು ಅಮೆರಿಕದ ಕನ್ಸರ್ವೇಟಿವ್‌ಗಳ ತೀವ್ರ ಟೀಕೆಗೆ ಗುರಿಯಾಗಿದೆ. ಒಬಾಮಾ ಅವರು ತಲೆಬಗ್ಗಿಸಿದ ಸಂಜ್ಞೆಯು, ಅಸೂಕ್ತ ಮತ್ತು ದೌರ್ಬಲ್ಯದ ಸಂಕೇತವೆಂದು ಕನ್ಸರ್ವೇಟಿವ್‌ಗಳು ಬ್ಲಾಗ್‌ಗಳಲ್ಲಿ ಬರೆದಿದ್ದು, ಒಬ್ಬ ಎಡಪಂಥೀಯ ಬ್ಲಾಗರ್ ಅದನ್ನು ದೇಶದ್ರೋಹ ಎಂದು ಕರೆಯುವ ಹಂತಕ್ಕೂ ತಲುಪಿದ್ದಾರೆ.

ಚಕ್ರವರ್ತಿ ಅಕಿಹಿಟೊ ಮತ್ತು ಚಕ್ರವರ್ತಿನಿ ಮಿಚಿಕೊ ಶನಿವಾರ ಒಬಾಮಾ ಭೇಟಿಯಲ್ಲಿ ಆತಿಥ್ಯ ವಹಿಸಿದ್ದರು. ಅಕಿಹಿಟೊ ಕೈಕುಲುಕಿದ ಒಬಾಮಾ ಮುಂದಕ್ಕೆ 90 ಡಿಗ್ರಿಗಳಷ್ಟು ಬಾಗಿ ವಂದಿಸಿದರೆಂದು ವರದಿಯಾಗಿದೆ. ಈ ಕ್ರಮದಿಂದ ಜಪಾನ್‌ನಲ್ಲಿ ಅವರಿಗೆ ಬೆಂಬಲವಾಗಿ ಕೆಲವು ಅಂಕಗಳನ್ನು ಗಳಿಸಬಹುದು. ಆದರೆ ಸ್ವದೇಶದಲ್ಲಿ ಅವರಿಗೆ ಖಂಡಿತವಾಗಿ ಅಸಮಾಧಾನ ವ್ಯಕ್ತವಾಗುತ್ತದೆಂದು ಆಂಡ್ರಿವ್ ಮಾಲ್ಕಮ್ ಬರೆದಿದ್ದಾರೆ.

ಅಮೆರಿಕದ ಹೊಸ ಅಧ್ಯಕ್ಷರು ಎಷ್ಟು ಕಾಲದವರೆಗೆ ವಿಶ್ವದ ಪ್ರಭುತ್ವವನ್ನು ಉಳಿಸಿಕೊಳ್ಳುತ್ತಾರೆಂದು ಮಾಲ್ಕಮ್ ಪ್ರಶ್ನಿಸಿದ್ದು, ಉಪಾಧ್ಯಕ್ಷ ಡಿಕ್ ಚೀನಿ ಅವರು ಅಕಿಹಿಟೊ ಅವರಿಗೆ 2007ರಲ್ಲಿ ಸರಳವಾದ ಹಸ್ತಲಾಘವ ನೀಡಿದ್ದು ಸೂಕ್ತವಾದ ವಿಧಾನ ಎಂದು ಅವರು ಹೇಳಿದ್ದಾರೆ. ಒಬಾಮಾ ಅವರು ಸೌದಿ ರಾಜ ಅಬ್ದುಲ್ಲಾ ಅವರಿಗೆ ಕಳೆದ ಏಪ್ರಿಲ್‌ನಲ್ಲಿ ಅರ್ಧದಷ್ಟು ತೆಲೆಬಾಗಿಸಿದಾಗ ಇದೇ ರೀತಿಯ ಟೀಕೆಗೆ ಗುರಿಯಾಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ