ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬುಗ್ತಿ ಹತ್ಯೆ: ಮುಷರಫ್ ವಿರುದ್ಧ ಕ್ರಮ ಸಂಭವ (Bugthi | Musharaf | Baloochi | Malik)
Feedback Print Bookmark and Share
 
ಬಲೂಚಿಸ್ತಾನ ಆಡಳಿತವು ಪಾಕ್ ಮಾಜಿ ಅಧ್ಯಕ್ಷ ಮುಷರಫ್ ಅವರ ಬಂಧನಕ್ಕೆ ಮನವಿ ಸಲ್ಲಿಸಿದರೆ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತದೆಂದು ಆಂತರಿಕ ಸಚಿವ ರೆಹಮಾನ್ ಮಲಿಕ್ ಹೇಳಿದ್ದಾರೆ.

ಮುಷರಫ್ ಬಂಧನಕ್ಕೆ ಬಲೂಚಿಸ್ತಾನ ಸರ್ಕಾರ ಇದುವರೆಗೆ ಬೇಡಿಕೆ ಸಲ್ಲಿಸಿಲ್ಲವೆಂದು ಮಲಿಕ್ ಅವರು ಟಿವಿ ಚಾನೆಲ್‌ವೊಂದಕ್ಕೆ ತಿಳಿಸಿದ್ದಾರೆ. 2006ರ ಮಿಲಿಟರಿ ಕಾರ್ಯಾಚರಣೆ ಸಂದರ್ಭದಲ್ಲಿ ಬಲೂಚಿ ನಾಯಕ ನವಾಬ್ ಬುಗ್ತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಷರಫ್ ಮತ್ತು ಅವರ ಆಪ್ತಸಂಗಡಿಗರ ವಿರುದ್ಧ ಕೋರ್ಟ್ ಆದೇಶದ ಮೇರೆಗೆ ಕೊಲೆ ಪ್ರಕರಣವನ್ನು ಬಲೂಚಿಸ್ತಾನ ಪ್ರಾಂತ್ಯದ ಪೊಲೀಸರು ಕಳೆದ ತಿಂಗಳು ದಾಖಲು ಮಾಡಿದ್ದರು.

ಬುಗ್ತಿ ಅವರ ಪುತ್ರ ಸಲ್ಲಿಸಿದ್ದ ಅರ್ಜಿ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲು ಕೋರ್ಟ್ ಆದೇಶ ನೀಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ