ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 2012ಕ್ಕೆ ಪ್ರಳಯ ಆಗಲ್ಲ; ಭಯ ಬೇಡ! (archeologist | 2012 doomsday | prophecy | Yucatan)
Feedback Print Bookmark and Share
 
ಜನರಲ್ಲಿ ಈಗಾಗಲೇ ಭೀತಿ ಮೂಡಿಸಿರುವ ಜಲಪ್ರಳಯದ ಸುದ್ದಿಯ ಬೆನ್ನಲ್ಲೇ, ಜಗತ್ತಿನಲ್ಲಿ 2012ರ ಡಿಸೆಂಬರ್‌ನಲ್ಲಿ ಪ್ರಳಯ ಸಂಭವಿಸುತ್ತದೆ ಎಂಬ ಊಹಾಪೋಹವನ್ನು ಕೆನಡಾದ ಪುರಾತತ್ವ ತಜ್ಞೆ ಕ್ಯಾಥರೀನ್ ರೀಸ್ ಟೇಲರ್ ತಳ್ಳಿಹಾಕಿದ್ದು, ಯುಕಟಾನ್ ದ್ವೀಪಕಲ್ಪದ ಮಾಯಾ ಜನರ ನಂಬಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದರಿಂದ ಇಂತಹ ಗುಲ್ಲೆದ್ದಿದೆ ಎನ್ನುವ ಮೂಲಕ ಯಾರೂ ಈ ಬಗ್ಗೆ ಭಯಪಡಬೇಕಾಗಿಲ್ಲ ಎಂದಿದ್ದಾರೆ.

ಗ್ವಾಟೆಮಾಲಾ, ಬೆಲಿಜ್,ಎಲ್‌ಸಾಲ್ವಡಾರ್, ಈಕ್ವೆಡಾರ್‌ಗಳನ್ನು ಈ ಯುಕುಟಾನ್ ದ್ವೀಪಕಲ್ಪ ಹೊಂದಿದೆ. ಇದು ಮಾಯಾ ಜನರು ನೆಲೆಸಿದ ಸ್ಥಳ. ಇಲ್ಲಿ ದೊರೆತ ಆರನೇ ಟೋರ್ಟುಗೇರೊ ಸ್ಮಾರಕದಲ್ಲಿ 2012ರ ಡಿಸೆಂಬರ್ 21ರಂದು ಜಗತ್ತು ಕೊನೆಗೊಳ್ಳುತ್ತದೆ ಎಂದು ತಿಳಿಸಲಾಗಿದೆ ಎಂದು ಟೇಲರ್ ವಿವರಿಸಿದ್ದಾರೆ.

2012ರ ಡಿಸೆಂಬರ್‌ 21ರ ಬೆಳಿಗ್ಗೆ ಬೆಳಿಗ್ಗೆ 11.11ಕ್ಕೆ ಪ್ರಾಚೀನ ಮಾಯಾ ಕ್ಯಾಲೆಂಡರ್‌ನ 5,125 ವರ್ಷಗಳ ಚಕ್ರ ಕೊನೆಗೊಳ್ಳುತ್ತದೆ. ಈ ಚಕ್ರದ ಅಂತ್ಯವನ್ನೇ ಜಗತ್ತಿನ ಅಂತ್ಯ ಎಂದು ತಪ್ಪಾಗಿ ಪರಿಗಣಿಸಲಾಗಿದೆ. ಈ ದಾಖಲೆಗಳನ್ನು ಭಾಷಾಂತರಿಸಿದಾಗ ಅಂದು ಏನೋ ಒಂದು ಘಟನೆ ನಡೆಯುತ್ತದೆ ಎಂದು ಮಾತ್ರ ತಿಳಿಸಲಾಗಿದೆ.

ಈ ಹಿಂದೆ ನಡೆದಿದ್ದ ಘಟನೆಯಂತಹ ಘಟನೆ ಮತ್ತೆ ಮರುಕಳಿಸುತ್ತದೆ ಎಂದಷ್ಟೇ ಅದರಲ್ಲಿ ತಿಳಿಸಲಾಗಿದೆಯೇ ಹೊರತು ಪ್ರಳಯದ ಉಲ್ಲೇಖ ಅದರಲ್ಲಿ ಇಲ್ಲ ಎಂದು ವಿವರಿಸಿದ್ದಾರೆ. ಆ ನಿಟ್ಟಿನಲ್ಲಿ 2012ಕ್ಕೆ ಜಗತ್ತಿನಲ್ಲಿ ಪ್ರಳಯವಾಗುತ್ತದೆ ಎಂಬ ಆತಂಕದಲ್ಲಿ ಯಾವುದೇ ಹುರುಳಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ