ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕತ್ತರಿಸಿದ ಕೈಯೊಂದಿಗೆ ಶವವಾದ ಪಂಜಾಬಿ ಮಹಿಳೆ (London | British | Aulakh | Aulakh,)
Feedback Print Bookmark and Share
 
ಲಂಡನ್ ಉಪನಗರದ ಬೀದಿಯಲ್ಲಿ ಸೋಮವಾರ ಕತ್ತರಿಸಿದ ಕೈಯೊಂದಿಗೆ ಹೆಣವಾಗಿ ಬಿದ್ದಿದ್ದ ಬ್ರಿಟನ್ನಿನ ಪಂಜಾಬಿ ಮಹಿಳೆಯ ಭಾರತೀಯ ಸಂಜಾತ ಪರಿತ್ಯಕ್ತ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬ್ರಿಟನ್ ದೊಡ್ಡ ಏಷ್ಯ ರೇಡಿಯೊ ಕೇಂದ್ರ ಸನ್‌ರೈಸ್ ರೇಡಿಯೊದಲ್ಲಿ ಸ್ವಾಗತಕಾರಿಣಿಯಾಗಿದ್ದ ಗೀತಾ ಅಲಖ್ ಅವರು ಪಶ್ಚಿಮ ಲಂಡನ್ ನೆರೆಯಲ್ಲಿರುವ ಗ್ರೀನ್‌ಪೋರ್ಡ್‌ನ ಬೀದಿಯಲ್ಲಿ ಶವವಾಗಿ ಬಿದ್ದಿದ್ದನ್ನು ದಾರಿಹೋಕನೊಬ್ಬ ಗಮನಿಸಿದ.

28 ವರ್ಷ ವಯಸ್ಸಿನ ಅಲಖ್ ತಲೆಗೆ ಗಾಯವಾಗಿದ್ದು, ಕೈಯೊಂದನ್ನು ಕತ್ತರಿಸಲಾಗಿತ್ತು ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. 8 ಮತ್ತು 9 ವರ್ಷ ಪ್ರಾಯದ ತನ್ನ ಇಬ್ಬರು ಮಕ್ಕಳನ್ನು ಕರೆತರಲು ಕೆಲಸ ಮುಗಿಸಿ ಹೊರಟಿದ್ದ ಅಲಖ್ ಕೊಲೆಯಾಗಿ ಬಿದ್ದಿದ್ದರು.

ಅಲಕ್ ಅವರ ಪರಿತ್ಯಕ್ತ ಪತಿ ಬಂಧಿತ 6 ಜನರಲ್ಲಿ ಒಬ್ಬರಾಗಿದ್ದಾರೆಂದು ಬ್ರಿಟನ್ ಪೊಲೀಸರು ತಿಳಿಸಿದ್ದು, ಶಂಕಿತರ ವಿರುದ್ಧ ಆರೋಪ ಹೊರಿಸುವ ತನಕ ಅವರನ್ನು ಹೆಸರಿಸುವುದಿಲ್ಲವೆಂದು ತಿಳಿಸಿದ್ದಾರೆ. ಈ ಘಟನೆಯಿಂದ ಗಿಜಿಗುಡುತ್ತಿದ್ದ ಗ್ರೀನ್‌ಪೋರ್ಡ್ ಉಪನಗರದಲ್ಲಿ ಮತ್ತು ಅಲಖ್ ಕೆಲಸ ಮಾಡುತ್ತಿದ್ದ ಸೌತಾಲ್‌ನಲ್ಲಿ ಆಘಾತವುಂಟುಮಾಡಿದೆ. ಎರಡು ಪ್ರದೇಶಗಳು ನೆರೆಹೊರೆಯಲ್ಲಿದ್ದು ಪಂಜಾಬಿ ಸಮುದಾಯ ದೊಡ್ಡ ಸಂಖ್ಯೆಯಲ್ಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಲಂಡನ್, ಬ್ರಿಟನ್, ಸನ್ರೈಸ್, ಅಲಖ್