ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜನಾಂಗೀಯ ಹಲ್ಲೆ: ದಾಳಿಕೋರನಿಗೆ ಕಠಿಣ ಶಿಕ್ಷೆ (Melbourne | Indians | Victoria | Doctor)
Feedback Print Bookmark and Share
 
ಭಾರತೀಯರ ವಿರುದ್ಧ ಬೀದಿಅಪರಾಧಗಳು ಹೇಡಿತನದ ಕೃತ್ಯವೆಂದು ವಿಕ್ಟೋರಿಯ ಕೋರ್ಟ್ ತೀರ್ಮಾನಿಸಿ, ಭಾರತೀಯ ಮ‌ೂಲದ ವೈದ್ಯರೊಬ್ಬರ ಮೇಲೆ ಹಲ್ಲೆ ಮಾಡಿದ ದಾಳಿಕೋರರಿಗೆ ಸುದೀರ್ಘಾವಧಿಯ ಶಿಕ್ಷೆಯನ್ನು ವಿಧಿಸಿದೆ.ಹೈಕೆರ್‌ವಾಲ್ ಸ್ಟೇಟ್ ಕೌಂಟಿ ನ್ಯಾಯಾಧೀಶ ಜೋಯಿ ಗುಲ್ಲಾಸಿ ಬುಧವಾರ ಭಾರತೀಯ ವೈದ್ಯರ ಮೇಲೆ ಹಲ್ಲೆ ಮಾಡಿದ 20ರ ಪ್ರಾಯದ ಅಜೋಪಾರ್ಡಿಗೆ ಹದಿನೆಂಟೂವರೆ ವರ್ಷಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.

ಆರೋಪಿಯು ಬ್ಯಾಸ್ಕೆಟ್‌ಬಾಲ್ ಬ್ಯಾಟಿನಿಂದ ವೈದ್ಯ ಮುಖೇಶ್ ಹೈರ್ಕರ್‌ವಾಲ್ ಅವರಿಗೆ ತೀವ್ರವಾಗಿ ಥಳಿಸಿದ್ದನೆಂದು ಆರೋಪಿಸಲಾಗಿದೆ. ಆಸ್ಟ್ರೇಲಿಯ ವೈದ್ಯಕೀಯ ಒಕ್ಕೂಟದ ಮಾಜಿ ಮುಖ್ಯಸ್ಥರಾಗಿದ್ದ ಹೈಕರ್‌ವಾಲ್ ಸೆ.27ರಂದು ವಿಲಿಯಂಸ್ಟೌನ್ ಉಪನಗರದ ಪಾರ್ಕ್‌ ಮ‌ೂಲಕ ಹಾದುಹೋಗುತ್ತಿದ್ದಾಗ, ಯುವಕರು ದಾಳಿ ಮಾಡಿ ಥಳಿಸಿದರೆಂದು ವರದಿಯಾಗಿದೆ.

ಇನ್ನೊಬ್ಬ ಸಹಆರೋಪಿ ಮೈಕೇಲ್ ಬಲ್ಟಾಟ್‌ಜಿಸ್ ಅಜೋರ್‌ಪಾಡಿ ಜತೆ ಸುಮಾರು 23 ಸಶಸ್ತ್ರ ದರೋಡೆಗಳಲ್ಲಿ 2 ತಿಂಗಳ ಅವಧಿಯಲ್ಲಿ ಭಾಗಿಯಾಗಿದ್ದು, ಅವನಿಗೆ ಹದಿನಾರೂವರೆ ವರ್ಷಗಳ ಜೈಲುಶಿಕ್ಷೆ ಮತ್ತು ಪೆರೋಲ್‌ಗೆ ಅರ್ಹತೆ ಪಡೆಯಬೇಕಿದ್ದರೆ ಹತ್ತೂವರೆ ವರ್ಷ ಜೈಲುಶಿಕ್ಷೆಯನ್ನು ಪೂರೈಸಬೇಕಾಗಿದೆ.

ಮ‌ೂರನೇ ಆರೋಪಿ ಸೀನ್ ಗೇಬ್ರಿಯಲ್ 9 ವರ್ಷ 9 ತಿಂಗಳು ಕಾರಾಗೃಹ ಶಿಕ್ಷೆಯನ್ನು ವಿಧಿಸಲಾಗಿದೆ. ಶಿಕ್ಷೆಗಳನ್ನು ಪ್ರಕಟಿಸಿದ ನ್ಯಾಯಾಧೀಶ ಗುಲ್ಲಾಸಿ, ದಾಳಿಗಳನ್ನು ಹೇಡಿತನದ ಕೃತ್ಯವೆಂದು ಟೀಕಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಕ್ಟೋರಿಯ, ಅಜೋಪಾರ್ಡಿ