ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಿಂಗ್ ಜತೆ ಚೀನಾ ಭಾವನೆ ಹಂಚಿಕೊಳ್ಳುವ ಒಬಾಮಾ (India | China | Singh | White House)
Feedback Print Bookmark and Share
 
ಭಾರತ ತಮ್ಮ ರಾಷ್ಟ್ರದ ಪ್ರಮುಖ ಮಿತ್ರಪಕ್ಷ ಮತ್ತು ಸಹಭಾಗಿ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ. ಅಧ್ಯಕ್ಷ ಬರಾಕ್ ಒಬಾಮಾ ಅವರು ತಮ್ಮ ಚೀನಾ ಭೇಟಿಯನ್ನು ಕುರಿತ ಚಿಂತನೆಗಳನ್ನು ಮತ್ತು ಭಾವನೆಗಳನ್ನು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಇಲ್ಲಿಗೆ ಮುಂದಿನ ವಾರ ಆಗಮಿಸಿದಾಗ ಮನದಟ್ಟು ಮಾಡಲಿದ್ದಾರೆಂದು ಅಮೆರಿಕ ತಿಳಿಸಿದೆ.

ಅಧ್ಯಕ್ಷ ಒಬಾಮಾ ಅವರು ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಮನಮೋಹನ್ ಸಿಂಗ್ ಅವರು,ಶ್ವೇತಭವನದಲ್ಲಿ ಪ್ರಥಮ ಬಾರಿಗೆ ಆತಿಥ್ಯ ಸ್ವೀಕರಿಸಲಿರುವ ಸರ್ಕಾರದ ಮುಖ್ಯಸ್ಥರಾಗಲಿದ್ದಾರೆ.

ಅಧ್ಯಕ್ಷರು ಈಗತಾನೇ ಚೀನಾದಿಂದ ವಾಪಸು ಬಂದಿದ್ದು, ಅವರ ಮನಸ್ಸಿನಲ್ಲಿ ಚೀನಾ ಪ್ರವಾಸ ಹಚ್ಚಹೊಸದಾಗಿ ಉಳಿದಿರುವಾಗಲೇ ಚೀನಾಗೆ ತಮ್ಮ ಭೇಟಿಯ ಬಗ್ಗೆ ಭಾವನೆಗಳನ್ನು ಮತ್ತು ಚಿಂತನೆಗಳನ್ನು ಅವರು ಹಂಚಿಕೊಳ್ಳಲಿದ್ದಾರೆಂದು ವಿದೇಶಾಂಗ ಇಲಾಖೆ ವಕ್ತಾರ ಐಯಾನ್ ಕೆಲ್ಲಿ ವರದಿಗಾರರಿಗೆ ತಿಳಿಸಿದರು. ನ.24ರಂದು ಒಬಾಮಾ ಅವರು ಪ್ರಧಾನಿ ಸಿಂಗ್ ಅವರನ್ನು ಶ್ವೇತಭವನದಲ್ಲಿ ಭೇಟಿಯಾಗಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭಾರತ, ಒಬಾಮಾ, ಸಿಂಗ್, ಅಮೆರಿಕ