ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 36 ಜನರ ಬಿಡುಗಡೆಗೆ ಕಡಲ್ಗಳ್ಳರಿಗೆ 33 ಲಕ್ಷ ಡಾಲರ್ (Pirates | Ransom | Hostage | Alakrana)
Feedback Print Bookmark and Share
 
ಸೊಮಾಲಿ ಕಡಲ್ಗಳ್ಳರು ಒತ್ತೆಯಾಗಿರಿಸಿಕೊಂಡ ಸ್ಪೇನ್ ನೌಕೆಯನ್ನು ಹಾಗೂ ಅದರಲ್ಲಿದ್ದ 36 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. ಸ್ಪೇನ್ ಸರ್ಕಾರ ಅವರ ಬಿಡುಗಡೆಗೆ 33 ಲಕ್ಷ ಡಾಲರ್ ಒತ್ತೆಹಣ ಪಾವತಿ ಮಾಡಿದ್ದರಿಂದ 36 ಮಂದಿಯನ್ನು ಬಿಡುಗಡೆ ಮಾಡಿದ್ದಾಗಿ ಕಡಲ್ಗಳ್ಳರು ಹೇಳಿದ್ದಾರೆ. ಕಡಲ್ಗಳ್ಳರಿಗೆ ಒತ್ತೆಹಣ ನೀಡಿದ ವಿಷಯವನ್ನು ಸ್ಪೇನ್ ಆಡಳಿತ ದೃಢಪಡಿಸಲೂ ಇಲ್ಲ ಮತ್ತು ನಿರಾಕರಿಸಲೂ ಇಲ್ಲವೆನ್ನಲಾಗಿದೆ.

ಒತ್ತೆಯಾಳುಗಳನ್ನು ಮತ್ತು ಅಲಾಕ್ರಾನಾ ಎಂಬ ನೌಕೆಯನ್ನು ಬಿಡುಗಡೆ ಮಾಡಿದ ಬಳಿಕ,ಶತ್ರುಪ್ರದೇಶದಿಂದ ಹೊರಕ್ಕೆ ಎರಡು ಸ್ಪೇನ್ ಯುದ್ಧವಿಮಾನಗಳ ಬೆಂಗಾವಲಿನಲ್ಲಿ ಕರೆದೊಯ್ಯಲಾಗಿದೆ. ಸೊಮಾಲಿಯ ಇಬ್ಬರು ಕಡಲ್ಗಳ್ಳರನ್ನು ಅಪಹರಣದ ಆರೋಪದ ಮೇಲೆ ಸ್ಪೇನ್ ಕೋರ್ಟ್‌ನಲ್ಲಿ ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲೇ ಒತ್ತೆಯಾಳುಗಳ ಬಿಡುಗಡೆ ನಡೆದಿದೆ.

ಅಲಾಕ್ರಾನಾ ನೌಕೆ ಅಪಹರಿಸಿದ್ದ 12 ಮಂದಿ ಕಡಲ್ಗಳ್ಳರು ಮಂಗಳವಾರ ಮಧ್ಯಾಹ್ನ 12ಗಂಟೆಗೆ ವಾಪಸು ಬಂದು ಹರದಾರೆ ನಗರದಲ್ಲಿ ಕಲೆತರೆಂದು ಸ್ಥಳೀಯ ಸೊಮಾಲಿ ಗ್ರಾಮಸ್ಥ ಹೇಳಿದ್ದಾನೆ. ಕಡಲ್ಲಳ್ಳರಿಗೆ 3.3 ದಶಲಕ್ಷ ಡಾಲರ್ ಒತ್ತೆಹಣವನ್ನು ನೀಡಿದ ಬಳಿಕ ಕಡಲ್ಗಳ್ಳರು ನೌಕೆಯನ್ನು ಬಿಟ್ಟು ತೆರಳಿದರೆಂದು ವರದಿಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ