ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 100% ಪ್ರಾಮಾಣಿಕ ಪಟ್ಟ ಹೊತ್ತ ನ್ಯೂಜಿಲೆಂಡ್ (Sydney | Denmark | Corruption | New Zealand)
Feedback Print Bookmark and Share
 
180 ರಾಷ್ಟ್ರಗಳ ಪಟ್ಟಿಯಲ್ಲಿ ವಿಶ್ವದ ಅತ್ಯಂತ ಕಡಿಮೆ ಭ್ರಷ್ಟಾಚಾರದ ರಾಷ್ಟ್ರವಾಗಿ ನ್ಯೂಜಿಲೆಂಡ್ ರಾಷ್ಟ್ರವನ್ನು ಹೆಸರಿಸಲಾಗಿದೆ. ಜಾಗತಿಕ ಹಿಂಜರಿತ ಮತ್ತು ಪ್ರಸಕ್ತ ಸಂಘರ್ಷಗಳು ಸವಾಲಾಗಿ ಪರಿಣಮಿಸಿರುವ ನಡುವೆ ಡೆನ್ಮಾರ್ಕ್ ತನ್ನ ಸ್ಥಾನವನ್ನು ಬಿಟ್ಟುಕೊಟ್ಟಿದೆ. ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ನ ವಾರ್ಷಿಕ ಸೂಚ್ಯಂಕ ಸುಮಾರು 13 ಸ್ವತಂತ್ರ ಸಮೀಕ್ಷೆಗಳ ಅನ್ವಯ 0ಯಿಂದ 10ರ ಪ್ರಮಾಣದಲ್ಲಿ 180 ರಾಷ್ಟ್ರಗಳಿಗೆ ದರ್ಜೆ ನೀಡಿದೆ.

0ಯನ್ನು ಅತ್ಯಂತ ಭ್ರಷ್ಟ ಮತ್ತು 10ನ್ನು ಭ್ರಷ್ಟಾಚಾರದ ಕನಿಷ್ಠ ಮಟ್ಟವೆಂದು ಪರಿಗಣಿಸಲಾಗಿದೆ. ಕಳೆದ ವರ್ಷ ಎರಡನೇ ಸ್ಥಾನದಲ್ಲಿದ್ದ ನ್ಯೂಜಿಲೆಂಡ್ ಕೋಷ್ಟಕದಲ್ಲಿ 9.4 ಅಂಕ ಗಳಿಸಿದ್ದು, ಡೆನ್ಮಾರ್ಕ್ 9.3 ಅಂಕದೊಂದಿಗೆ ಎರಡನೇ ಸ್ಥಾನ ಪಡೆದರೆ, ಸಿಂಗಪುರ ಮತ್ತು ಸ್ಪೇನ್ ತಲಾ 9.2 ಅಂಕಗೊಳೊಂದಿಗೆ ಮತ್ತು ಸ್ವಿಜರ್‌ಲ್ಯಾಂಡ್ 9 ಅಂಕ ಗಳಿಸಿದೆ. ಕೋಷ್ಟಕದಲ್ಲಿ ಕೆಳಗಿನ ಪಟ್ಟಿಯಲ್ಲಿರುವ ರಾಷ್ಟ್ರಗಳು ಅಸ್ಥಿರತೆಗೊಳಗಾಗಿವೆ ಅಥವಾ ಯುದ್ಧ ಮತ್ತಿತರ ಸಂಘರ್ಷಗಳಿಂದ ಸಾರ್ವಜನಿಕ ಕ್ಷೇತ್ರಗಳು ಜರ್ಜರಿತವಾಗಿವೆ ಮತ್ತು ಆಡಳಿತ ಮ‌ೂಲಸೌಲಭ್ಯ ಕುಸಿದುಬಿದ್ದಿವೆ.

ಸೊಮಾಲಿಯ 1.1 ಅಂಕ, ಆಫ್ಘಾನಿಸ್ತಾನ 1.3, ಮ್ಯಾನ್ಮಾರ್ 1.4 ಮತ್ತು ಸೂಡನ್ ಮತ್ತು ಇರಾಕ್ 1.5 ಅಂಕ ಗಳಿಸಿವೆ.ಭ್ರಷ್ಟಾಚಾರ ನಿಗ್ರಹಕ್ಕೆ ಸಂಸತ್ತುಗಳ ದೃಢ ಕಣ್ತಪ್ಪು, ಉತ್ತಮ ನಿರ್ವಹಣೆಯ ನ್ಯಾಯಾಂಗ, ಸ್ವತಂತ್ರ ಮತ್ತು ಸೂಕ್ತ ಸಂಪನ್ಮೂಲದ ಲೆಕ್ಕತಪಾಸಣೆ ಮತ್ತು ಭಯೋತ್ಪಾದನೆ ನಿಗ್ರಹ ಸಂಸ್ಥೆಗಳು, ಸಾರ್ವಜನಿಕ ಆಯವ್ಯಯಗಳಲ್ಲಿ, ಆದಾಯಗಳಲ್ಲಿ ಮತ್ತು ನೆರವು ಹರಿವಿನಲ್ಲಿ ಪಾರದರ್ಶಕತೆ ಮತ್ತು ಸ್ವತಂತ್ರಮಾಧ್ಯಮಕ್ಕೆ ಅವಕಾಶ ಹಾಗೂ ಚಲನಶೀಲ ನಾಗರಿಕ ಸಮಾಜವು ಅವಶ್ಯಕವೆಂದು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಅಧ್ಯಕ್ಷ ಹುಗುಟ್ಟೆ ಲ್ಯಾಬೆಲ್ಲೆ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ