ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಾಂಡೊಂ ನುಂಗಿ ಹೆರಾಯಿನ್ ಕಳ್ಳಸಾಗಣೆ (Pakistani | Heroin | Stomach | Butt,)
Feedback Print Bookmark and Share
 
ಬ್ಯಾಂಕಾಕ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಪಾಕಿಸ್ತಾನದ ವ್ಯಕ್ತಿಯೊಬ್ಬನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದಾಗ ಅವನ ಹೊಟ್ಟೆಯಲ್ಲಿ 54 ಕಾಂಡೋಂಗಳು ಪತ್ತೆಯಾಗಿದ್ದು. ಅರ್ಧ ಕಿಲೊ ಹೆರಾಯಿನ್ ಕಳ್ಳಸಾಗಣೆಗೆ ಈ ಕಾಂಡೊಂಗಳನ್ನು ಬಳಸಿದ್ದ.

24 ವರ್ಷ ವಯಸ್ಸಿನ ಕಮ್ರಾನ್ ಪರ್ವೇಜ್ ಭಟ್‌ನನ್ನು ಮಂಗಳವಾರ ಸುವರ್ಣಭೂಮಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂಧಿಸಿ ಎಕ್ಸರೆ ತಪಾಸಣೆಗೆ ಒಳಪಡಿಸಿದಾಗ ಕಸ್ಟಮ್ಸ್ ಅಧಿಕಾರಿಗಳು ಅವನ ಹೊಟ್ಟೆಯಲ್ಲಿ 54 ಕಾಂಡೋಮ್‌ಗಳನ್ನು ಪತ್ತೆಹಚ್ಚಿದರು. ಕಾಂಡೋಂಗಳಲ್ಲಿ ಒಟ್ಟು ಅರ್ಧ ಕೇಜಿ ಹೆರಾಯಿನ್ ತುಂಬಿ ಕಳ್ಳಸಾಗಣೆ ಮಾಡುತ್ತಿರುವುದು ಇದರಿಂದ ಬಯಲಾಗಿದೆ.

ವಿಮಾನದಲ್ಲಿ ಮಾದಕವಸ್ತು ಕಳ್ಳಸಾಗಣೆದಾರನಿದ್ದಾನೆಂಬ ಸುಳಿವನ್ನು ಪಡೆದ ಅಧಿಕಾರಿಗಳು, ಕಸ್ಟಮ್ಸ್‌ನಲ್ಲಿ 'ಯಾವ ವಸ್ತುಗಳೂ ಘೋಷಣೆಗೆ ಇಲ್ಲವೆಂಬ' ಚಾನೆಲ್ ಮ‌ೂಲಕ ಹಾದುಹೋದಾಗ ಅವನ ಅನುಮಾನಾಸ್ಪದ ವರ್ತನೆಯಿಂದ ತಡೆದು ನಿಲ್ಲಿಸಲಾಯಿತು. ಅವನ ದೇಹವನ್ನು ಮತ್ತು ಚೀಲಗಳನ್ನು ಶೋಧಿಸಿದಾಗ ಯಾವುದೂ ಪತ್ತೆಯಾಗಿಲ್ಲವೆಂದು ತಿಳಿದುಬಂದಿದ್ದು, ಕಡೆಯದಾಗಿ ಎಕ್ಸರೆ ಪರೀಕ್ಷೆಗೆ ಒಳಪಡಿಸಿದಾದ ಅವನು ಪೂರ್ಣ ಹೆರಾಯಿನ್ ಮಾದಕಪದಾರ್ಥ ತುಂಬಿದ್ದ ಕಾಂಡೊಮ್‌ಗಳನ್ನು ನುಂಗಿರುವುದು ಕಂಡುಬಂತು ಎಂದು ಹೇಳಿಕೆ ತಿಳಿಸಿದೆ.

ಮಾದಕವಸ್ತುವಿನ ಒಟ್ಟು ತೂಕ 570 ಗ್ರಾಂಗಳಾಗಿದ್ದು, ಥಾಯ್ಲಿಂಡ್‌ನಲ್ಲಿ ಅಂದಾಜು 1.7 ದಶಲಕ್ಷ ಬಾತ್(50,000 ಡಾಲರ್) ಮೌಲ್ಯದಿಂದ ಕೂಡಿದೆಯೆಂದು ಕಸ್ಟಮ್ಸ್ ಹೇಳಿದೆ. ಭಟ್‌ 'ಎ' ದರ್ಜೆಯ ಮಾದಕವಸ್ತು ಹೊಂದಿ ಕಳ್ಳಸಾಗಣೆ ಮಾಡಿದ ಆರೋಪ ಎದುರಿಸಿದ್ದು, ಥಾಯ್ಲೆಂಡ್‌ನಲ್ಲಿ ಸಂಭವನೀಯ ಮರಣದಂಡನೆ ಶಿಕ್ಷೆಗೆ ಅರ್ಹರೆನಿಸಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ