ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚೀನಾ ಬಾಂಧವ್ಯ, ಭಾರತಕ್ಕೆ ಹಾನಿಯಿಲ್ಲ: ಬರ್ನ್ಸ್ (South Asia | China | India | Burns)
Feedback Print Bookmark and Share
 
ದಕ್ಷಿಣ ಏಷ್ಯಾದಲ್ಲಿ ಚೀನಾ ಪಾತ್ರ ಕುರಿತು ಅಮೆರಿಕದ ಅನುಮೋದನೆಯನ್ನು ಭಾರತ ತೀವ್ರವಾಗಿ ಟೀಕಿಸಿದ ಬಳಿಕ, ಅಮೆರಿಕದ ಪ್ರಮುಖ ನಾಯಕರು ಹಾನಿ ನಿಯಂತ್ರಣ ಕ್ರಮಕ್ಕೆ ಮುಂದಾಗಿದ್ದು, ಚೀನಾ ಜತೆ ಬಾಂಧವ್ಯದಿಂದ ಭಾರತವನ್ನು ಬಲಿಕೊಡುವುದಿಲ್ಲವೆಂದು ಹೇಳಿದ್ದಾರೆ. ಅಮೆರಿಕವು ಚೀನಾ ಜತೆ ಉತ್ತಮ ಮತ್ತು ಆರೋಗ್ಯಕರ ಸಹಯೋಗ ಹೊಂದಲು ಆಸಕ್ತವಾಗಿದೆ.

ಆದರೆ ಭಾರತದ ಜತೆ ಬಾಂಧವ್ಯವನ್ನು ಬಲಿಕೊಟ್ಟು ಅವರ ಜತೆ ಸಹಭಾಗಿತ್ವ ಹೊಂದುವುದಿಲ್ಲ ಎಂದು ರಾಜಕೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿ ವಿಲಿಯಂ ಬರ್ನ್ಸ್ ತಿಳಿಸಿದ್ದಾರೆ. ಮುಂದಿನ ವಾರ ಪ್ರಧಾನಿ ಮನಮೋಹನ್ ಸಿಂಗ್ ಭೇಟಿಯ ಪೂರ್ವಪರಿಶೀಲನೆ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು ತಿಳಿಸಿದ್ದಾರೆ.

ಸಮಾನ ಅಂತಾರಾಷ್ಟ್ರೀಯ ಕಾಳಜಿ ಮತ್ತು ಆಫ್ಘಾನಿಸ್ತಾನದ ಬಗ್ಗೆ ಸಮ‌ೂಹ ಕಾಳಜಿ ಕುರಿತಂತೆ ಅಮೆರಿಕ-ಚೀನಾ ಜಂಟಿ ಹೇಳಿಕೆಯಲ್ಲಿನ ಉಲ್ಲೇಖವು ಆಫ್ಘಾನಿಸ್ತಾನದ ಸ್ಥಿರತೆಗೆ ಕೊಡುಗೆ ನೀಡುವಂತೆ ಚೀನಾ, ಭಾರತ ಮತ್ತು ಜಗತ್ತಿನ ಇತರೆ ರಾಷ್ಟ್ರಗಳತ್ತ ನಾವು ದೃಷ್ಟಿಹರಿಸುವ ನೇರ ಅಭಿವ್ಯಕ್ತಿಯಾಗಿದೆಯೆಂದು ವಿದೇಶಾಂಗ ಇಲಾಖೆಯಲ್ಲಿ ನ.3 ಅಧಿಕಾರಿಯಾಗಿರುವ ಬರ್ನ್ಸ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚೀನಾ, ಅಮೆರಿಕ, ಬಾಂಧವ್ಯ, ಬರ್ನ್ಸ್