ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪೇಶಾವರದಲ್ಲಿ ಉಗ್ರರ ಹೇಶಾರವ: 15 ಜನರ ಬಲಿ (suicide | Pakistan | Peshawar | Explosion)
Feedback Print Bookmark and Share
 
ವಾಯವ್ಯ ಪಾಕಿಸ್ತಾನದ ಪೇಶಾವರದಲ್ಲಿ ಉಗ್ರಗಾಮಿಗಳು ಮತ್ತೆ ಅಟ್ಟಹಾಸ ಮೆರೆದಿದ್ದು, ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 16 ಜನರು ಸತ್ತಿದ್ದು 25 ಜನರಿಗೆ ಗಾಯಗಳಾಗಿವೆಯೆಂದು ಪೊಲೀಸ್ ಮ‌ೂಲಗಳು ಹೇಳಿವೆ. ಪೇಶಾವರದ ಖೈಬರ್ ರಸ್ತೆಯ ಕೋರ್ಟ್ ಕಟ್ಟಡದ ಬಳಿ ಈ ಸ್ಫೋಟ ಸಂಭವಿಸಿದೆಯೆಂದು ಖಾಸಗಿ ಟಿವಿ ಡಾನ್ ನ್ಯೂಸ್ ವರದಿ ಮಾಡಿದೆ.

ನ್ಯಾಯಾಂಗ ಸಂಕೀರ್ಣದ ಮುಖ್ಯದ್ವಾರದ ಬಳಿ ಸ್ಫೋಟ ಸಂಭವಿಸಿದಾಗ ಕೋರ್ಟ್‌ನಲ್ಲಿ ಅನೇಕ ಮಂದಿ ವಕೀಲರು ಹಾಜರಿದ್ದರು. ಸತ್ತವರಲ್ಲಿ ಮ‌ೂವರು ಪೊಲೀಸರು ಮತ್ತು ಇಬ್ಬರು ವಕೀಲರು ಸೇರಿದ್ದಾರೆ. ಸ್ಫೋಟದಿಂದಾಗಿ ಅನೇಕ ವಾಹನಗಳು ನಾಶವಾಗಿವೆ. ಗುಪ್ತಚರ ಏಜೆನ್ಸಿಯ ಪ್ರಮುಖ ಕಚೇರಿಗಳು, ಗವರ್ನರ್ ಹೌಸ್ ಮತ್ತು ಮುಖ್ಯಮಂತ್ರಿಗಳ ನಿವಾಸ ಸಹ ಈ ಪ್ರದೇಶದಲ್ಲಿದೆ. ಕಾರೊಂದರಲ್ಲಿ ಸ್ಫೋಟ ಸಂಭವಿಸಿದೆಯೆಂದು ತಿಳಿದುಬಂದಿದೆ.

ಈ ಘಟನೆಯ ಬಳಿಕ ಖೈಬರ್ ರಸ್ತೆಯನ್ನು ಸಂಚಾರಕ್ಕೆ ಮುಚ್ಚಲಾಗಿದ್ದು, ಪೊಲೀಸರು ಪ್ರದೇಶವನ್ನು ಸುತ್ತುವರಿದಿದ್ದಾರೆ. ಪೇಶಾವರದಲ್ಲಿ ಎಲ್ಲ ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ವಾತಾವರಣ ಬಿಗುವಿನಿಂದ ಕೂಡಿದ್ದು, ರಕ್ಷಣಾ ತಂಡಗಳು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಒಯ್ದಿದ್ದಾರೆ. ಪಾಕಿಸ್ತಾನ ತಾಲಿಬಾನಿಗಳ ವಿರುದ್ಧ ಸೇನೆ ಕಾರ್ಯಾಚರಣೆ ಆರಂಭಿಸಿದಾಗಿನಿಂದ ಉಗ್ರಗಾಮಿಗಳು ಪದೇ ಪದೇ ಬಾಂಬ್ ದಾಳಿಗಳ ಮ‌ೂಲಕ ನೆತ್ತರಿನ ಕೋಡಿ ಹರಿಸಿದ್ದು, ತಮ್ಮ ಬಲ ಕುಂದಿಲ್ಲವೆಂದು ಸಾಬೀತು ಮಾಡಿದ್ದಾರೆ
ಸಂಬಂಧಿತ ಮಾಹಿತಿ ಹುಡುಕಿ