ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಂತಾನಹರಣದ ಬಳಿಕ ಹುಟ್ಟಿದ 'ಪವಾಡ' ಬಾಲಕ (Debbie | Sterilise | Pregnancy | Miracle)
Feedback Print Bookmark and Share
 
ಸುಮಾರು 13 ವರ್ಷಗಳ ಹಿಂದೆ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಎರಡು ಬಾರಿ ಒಳಗಾಗಿದ್ದ ಬ್ರಿಟನ್ನಿನ ತಾಯಿಯೊಬ್ಬರು ಪವಾಡಸದೃಶವಾಗಿ ಗಂಡುಮಗುವನ್ನು ಹೆತ್ತ ಆಶ್ಚರ್ಯಕಾರಿ ಘಟನೆ ನಡೆದಿದೆ. 43ರ ಪ್ರಾಯದ ಡೆಬ್ಬಿ ಅಮೋಸ್ ಎಂಬವರು ಮ‌ೂರು ಮಕ್ಕಳು ಹುಟ್ಟಿದ ಬಳಿಕ ಮತ್ತೆ ಗರ್ಭಧರಿಸದಂತೆ ತಡೆಯಲು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು.

ಆದರೆ ಮ‌ೂರು ತಿಂಗಳ ಹಿಂದೆ ಅವರ ಹೊಟ್ಟೆಯಲ್ಲಿ ವಿಚಿತ್ರ ಚಲನವಲನ ಕಾಣಿಸಿಕೊಂಡು ಪರೀಕ್ಷೆ ನಡೆಸಿದಾಗ 6 ತಿಂಗಳು ಗರ್ಭಿಣಿಯಾಗಿದ್ದು ಪತ್ತೆಯಾಯಿತು. ಈಗ ಅವರು ಕಳೆದ ವಾರ ಜನಿಸಿದ ಕೊನೋರ್ ಎಂಬ ಬಾಲಕನಿಗೆ ತಾಯಿಯಾಗಿದ್ದು, ಡೆಬ್ಬಿ ಮೊಮ್ಮಕ್ಕಳಿಗಿಂತ ಅವನು ಚಿಕ್ಕಪ್ರಾಯದವನಾಗಿದ್ದಾನೆ. ಅವರು 19 ವರ್ಷದವರಿದ್ದಾಗ, ಸಂತಾನಕ್ಕೆ ಉತ್ತೇಜನ ನೀಡುವ ಔಷಧಿ ಕ್ಲೋಮಿಡ್ ತೆಗೆದುಕೊಂಡಿದ್ದರಿಂದ ಗರ್ಭ ಧರಿಸಲು ನೆರವಾಗಿತ್ತು.

ಎರಡು ವರ್ಷಗಳ ಬಳಿಕ ಅವರಿಗೆ ಪುತ್ರ ಗ್ಲೆನ್ ಹುಟ್ಟಿದ್ದು, ಈಗ ಅವನಿಗೆ 19 ವರ್ಷಗಳು. ನಾಲ್ಕು ವರ್ಷಗಳ ಬಳಿಕ ಮತ್ತೊಬ್ಬ ಪುತ್ರಿ ಹುಟ್ಟಿದ್ದಳು. ಇನ್ನಷ್ಟು ಗರ್ಭಧಾರಣೆಯಾಗದಂತೆ ತಡೆಯಲು ಅವರು ಎರಡು ಬಾರಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಗುರಿಯಾಗಿದ್ದರೂ ಮತ್ತೆ ಗರ್ಭವತಿಯಾದರು.
ಸಂಬಂಧಿತ ಮಾಹಿತಿ ಹುಡುಕಿ