ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 515 ಕೆಮಿಕಲ್‌ಗಳು:ಸೌಂದರ್ಯಪ್ರಜ್ಞೆ ಮಹಿಳೆಯರಿಗೆ ಎಚ್ಚರ (Chemicals | Beauty | Lipstick | Lotion)
Feedback Print Bookmark and Share
 
ಸೌಂದರ್ಯವರ್ಧಕ ಉತ್ಪನ್ನಗಳು ಮಹಿಳೆಯ ಮುಖಕ್ಕೆ ಮತ್ತು ದೇಹಕ್ಕೆ ಹಾನಿಕರವಲ್ಲವೇ ಎನ್ನುವ ಪ್ರಶ್ನೆ ಉದ್ಭವಿಸಿದ್ದು, ಲಿಪ್‌ಸ್ಟಿಕ್, ಲೋಷನ್, ಮಸ್ಕರಾ ಮುಂತಾದವುಗಳು ಮಹಿಳೆಯ ಮುಖಕ್ಕೆ ಸುಮಾರು 515 ರಾಸಾಯನಿಕಗಳ ಲೇಪನ ಮಾಡುತ್ತದೆಂದು ಅಧ್ಯಯನ ವರದಿಯೊಂದು ತಿಳಿಸಿದೆ.

ಈ ಕುರಿತು ಸಂಶೋಧನೆ ನಡೆಸಿದ ಸೌಂದರ್ಯವರ್ಧಕ ಸಂಸ್ಥೆ ಬಯಾನ್‌ಸೆನ್‌ನ ಚಾರ್ಲೊಟ್ಟೆ ಸ್ಮಿತ್, ಯುವತಿಯರು ಸುಮಾರು 13 ಸೌಂದರ್ಯವರ್ಧಕ ಉತ್ಪನ್ನಗಳನ್ನು ಬಳಸುತ್ತಿದ್ದು, ಅವುಗಳಲ್ಲಿ ಬಹುತೇಕ 20ಕ್ಕೂ ಹೆಚ್ಚು ರಾಸಾಯನಿಕ ವಸ್ತುಗಳ ಮಿಶ್ರಣವಿದೆಯೆಂದು ಹೇಳಿದ್ದಾರೆ. ಸುಗಂಧ ಸರಾಸರಿ 250 ರಾಸಾಯನಿಕ ಪದಾರ್ಥಗಳನ್ನು ಹೊಂದಿದ್ದರೆ, ಕೆಲವು ಸೌಂದರ್ಯವರ್ಧಕಗಳಲ್ಲಿ 40 ರಾಸಾಯನಿಕ ಅಂಶಗಳಿರುತ್ತವೆಂದು ಸನ್ ವರದಿ ಮಾಡಿದೆ.

ಲಿಪ್‌ಸ್ಟಿಕ್ 33 ಅಂಶಗಳು, ದೇಹದ ಲೋಷನ್ 32, ಮಸ್ಕರಾ 29, ಕೈತೇವಗೊಳಿಸುವ ದ್ರವ 11 ಅಂಶಗಳನ್ನು ಹೊಂದಿವೆ. ಉಗುರಿನ ಪಾಲಿಶ್ ರಿಮ್ಮೆಲ್ 31 ಪದಾರ್ಥಗಳಿಂದ ತಯಾರಾಗಿದ್ದು, ದೇಹದ ಲೋಷನ್ ನಿವಿಯಾ ರಿಚ್ 32 ಪದಾರ್ಥಗಳಿಂದ ತಯಾರಾಗಿವೆ. ಕೆಲವು ಅಡಿಟಿವ್‌ಗಳು ಕ್ಯಾನ್ಸರ್, ಹಾರ್ಮೋನ್ ಸಮಸ್ಯೆಗಳು, ಚರ್ಮದ ಏರುಪೇರಿನ ಸ್ಥಿತಿ ಮತ್ತು ಅಲರ್ಜಿಗೆ ಕಾರಣವಾಗುತ್ತವೆಂದು ತಜ್ಞರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ