ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಫ್ಘಾನಿಸ್ತಾನ ಅಧ್ಯಕ್ಷರಾಗಿ ಕರ್ಜೈ ಪ್ರಮಾಣವಚನ (Karzai | Afghan | Krishna | Abdullah)
Feedback Print Bookmark and Share
 
ತಾಲಿಬಾನ್‌ನಿಂದ ಬಂಡುಕೋರ ಕೃತ್ಯಗಳ ತೀವ್ರತೆ, ಭ್ರಷ್ಟಾಚಾರ ಮ‌ೂಲೋತ್ಪಾಟನೆ ಮಾಡುವಂತೆ ತೀವ್ರ ಜಾಗತಿಕ ಒತ್ತಡ ಎದುರಿಸುತ್ತಿರುವ ಹಮೀದ್ ಕರ್ಜೈ ಗುರುವಾರ ಆಫ್ಘನ್ ಅಧ್ಯಕ್ಷರಾಗಿ ಐದು ವರ್ಷಗಳ ಅವಧಿಗೆ ಎರಡನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದರು. ವಂಚನೆಯ ಆರೋಪಗಳಿಂದ ಕೂಡಿದ ವಿವಾದಿತ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಏಕತೆ ಸರ್ಕಾರ ಸ್ಥಾಪಿಸುವ ಪ್ರತಿಜ್ಞೆ ತೊಟ್ಟರು.

ವಿದೇಶಾಂಗ ಸಚಿವ ಎಸ್‌.ಎಂ.ಕೃಷ್ಣ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಸೇರಿದಂತೆ ಸುಮಾರು 800 ಮಂದಿ ಗಣ್ಯಅತಿಥಿಗಳ ಸಮ್ಮುಖದಲ್ಲಿ ಬಿಗಿ ಬಂದೋ‌ಬಸ್ತಿನ ಅಧ್ಯಕ್ಷರ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ 51ರ ಪ್ರಾಯದ ಕರ್ಜೈ ಅವರಿಗೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಾಧೀಶ ಅದ್ಬುಲ್ ಸಲಾಂ ಅಜ್ಮಿ ಪ್ರಮಾಣವಚನ ಬೋಧಿಸಿದರು.

ಏಕತೆ ಸರ್ಕಾರಕ್ಕೆ ಸೇರುವಂತೆ ಚುನಾವಣೆಯಲ್ಲಿ ತಮ್ಮ ಎದುರಾಳಿಯಾಗಿದ್ದ ಅಬ್ದುಲ್ಲಾ ಅಬ್ದುಲ್ಲಾ ಅವರಿಗೆ ಅವರು ಆಹ್ವಾನ ನೀಡಿದ್ದಾರೆ.ಅಫ್ಘನ್ ಶಸ್ತ್ರಸಜ್ಜಿತ ಪಡೆಗಳು ದೇಶದ ಭದ್ರತಾ ಕರ್ತವ್ಯಗಳನ್ನು ನ್ಯಾಟೊ ಪಡೆಗಳಿಂದ ಮುಂದಿನ ಐದು ವರ್ಷಗಳಲ್ಲಿ ಸ್ವಾಧೀನಕ್ಕೆ ತೆಗೆದುಕೊಳ್ಳಲಿದೆಯೆಂದು ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

ಕರ್ಜೈ ಮತ್ತು ಅಬ್ದುಲ್ಲಾ ಅಬ್ದುಲ್ಲಾ ನಡುವೆ ಅಧ್ಯಕ್ಷಗಿರಿಗೆ ನಡೆದ ಚುನಾವಣೆಯಲ್ಲಿ ವ್ಯಾಪಕ ಭ್ರಷ್ಟಾಚಾರದ ಕೂಗು ಕೇಳಿಬಂದ ಹಿನ್ನೆಲೆಯಲ್ಲಿ ಎರಡನೇ ಹಂತದ ಚುನಾವಣೆ ನಡೆಸಲಾಯಿತು. ನ.7ರಂದು ನಡೆದ ಚುನಾವಣೆಯಲ್ಲಿ ಸ್ಪರ್ಧೆಯಿಂದ ಅಬ್ದುಲ್ಲಾ ಹಿಂದೆಗೆದುಕೊಂಡ ಬಳಿಕ ಕರ್ಜೈ ಅವರನ್ನು ವಿಜಯಿಯೆಂದು ಘೋಷಿಸಲಾಯಿತು.
ಸಂಬಂಧಿತ ಮಾಹಿತಿ ಹುಡುಕಿ