ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬ್ರಿಟನ್ ಥೇಮ್ಸ್ ನದಿಯ ಸೇತುವೆ ಹರಾಜು (Toll bridge | Thames | Britain | Swinford)
Feedback Print Bookmark and Share
 
ಲಂಡನ್ ಥೇಮ್ಸ್ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಟಾಲ್ ಸೇತುವೆಯನ್ನು ಮುಂದಿನ ತಿಂಗಳು ಹರಾಜು ಹಾಕಲಾಗುವುದು. ಸೇತುವೆಯ ಖರೀದಿದಾರರಿಗೆ ತೆರಿಗೆಮುಕ್ತ ಬಂಡವಾಳವನ್ನು ಐತಿಹಾಸಿಕ ಆಕರ್ಷಣೆಯೊಂದಿಗೆ ತಂದುಕೊಡುತ್ತದೆ.ಸ್ವಿನ್‌ಫೋರ್ಡ್ ಸೇತುವೆ ದಾಟುವ ವಾಹನಗಳಿಂದ ವರ್ಷಕ್ಕೆ 190,000 ಪೌಂಡ್ ಟಾಲ್ ಶುಲ್ಕ ರೂಪದಲ್ಲಿ ಪಾವತಿಯಾಗುತ್ತದೆ.

ಸೇತುವೆಯ ಮಾಲೀಕ ಯಾವುದೇ ತೆರಿಗೆ ಸಲ್ಲಿಸದೇ ಎಲ್ಲ ಹಣವನ್ನು ಜೇಬಿಗಿಳಿಸಬಹುದು. ವಾಯವ್ಯ ಲಂಡನ್ ಆಕ್ಸ್‌ಫರ್ಡ್‌ಶೈರಿನಲ್ಲಿರುವ 65 ಮೈಲು ಉದ್ದದ ಸೇತುವೆ 1.65 ಮಿಲಿಯನ್ ಪೌಂಡ್ ಬೆಲೆ ನಿಗದಿಮಾಡಲಾಗಿದೆ. ಸೇತುವೆ ಜತೆಗೆ ಸ್ಟೋನ್ ಟಾಲ್ ಕಾಟೇಜ್ ಮತ್ತು ಎಕರೆಗಟ್ಟಲೆ ಭೂಮಿ ಸಹ ಆಸ್ತಿ ಹರಾಜಿನಲ್ಲಿ ಸೇರಿದೆ.

ಬ್ರಿಟನ್‌ನ ಖಾಸಗಿ ಸ್ವತ್ತಿನ ವಸ್ತುಗಳಲ್ಲಿ ಸೇತುವೆ ಸಹ ಸೇರಿದ್ದು, ಸಂಸತ್ತು ಅರ್ಲ್ ಆಫ್ ಅಬಿಂಗ್‌ಡನ್ ಅವರಿಗೆ ಸೇತುವೆ ಮತ್ತು ಅದರ ಸಂಚಾರತೆರಿಗೆಯ ಮಾಲೀಕತ್ವವನ್ನು ನೀಡಿದ ಕಾಲವಾದ 18ನೇ ಶತಮಾನದಿಂದ ಆದಾಯತೆರಿಗೆಯಿಂದ ಮುಕ್ತವಾಗಿದೆ. ಸೇತುವೆಯು ಸಮೀಪದಲ್ಲಿ ವಾಸಿಸುವ ಕುಟುಂಬವೊಂದು ಮಾಲೀಕತ್ವ ಹೊಂದಿದೆಯೆಂದು ಸಮೀಕ್ಷಕ ಚಾರ್ಲಿ ಮಾಸನ್ ತಿಳಿಸಿದ್ದಾರೆ.

ಸೇತುವೆಯ ಟಾಲ್ ತೆರಿಗೆಗಳು ಗಂಭೀರ ಸಂಚಾರ ದಟ್ಟಣೆಯನ್ನು ಉಂಟುಮಾಡುತ್ತಿದ್ದು, ಹೆದ್ದಾರಿ ದರೋಡೆ ನಡೆಯುತ್ತಿದೆಯೆಂದು ನಿವಾಸಿಗಳು ದೂರುನೀಡಿದ್ದಾರೆ. ಸೇತುವೆಯನ್ನು ಖರೀದಿಸಿ ಟಾಲ್ ಶುಲ್ಕ ರದ್ದುಮಾಡುವಂತೆ ಅವರು ಸ್ಥಳೀಯ ಸರ್ಕಾರಿ ಕೌನ್ಸಿಲ್‌ಗೆ ಒತ್ತಾಯಿಸಿದ್ದರು. ಪ್ರಸಕ್ತ ಕಾರು ಚಾಲಕರು ಸೇತುವೆ ದಾಟಲು 8 ಅಮೆರಿಕ ಸೆಂಟ್ಸ್‌ಗಳನ್ನು ಮತ್ತು ಲಾರಿಗಳು 80 ಅಮೆರಿಕ ಸೆಂಟ್ಸ್‌ಗಳನ್ನು ಪಾವತಿ ಮಾಡುತ್ತಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಥೇಮ್ಸ್, ಟಾಲ್, ತೆರಿಗೆಗಳು