ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಫ್ಘನ್ ಪಡೆಗಳಿಗೆ ಹಸ್ತಾಂತರ ಗಡುವು ಸದ್ಯಕ್ಕಿಲ್ಲ: ಗೇಟ್ಸ್ (Washington | Gates | NATO | Timeline)
Feedback Print Bookmark and Share
 
ನ್ಯಾಟೊ ನೇತೃತ್ವದ ಪಡೆಗಳಿಂದ ಆಫ್ಘನ್ ಪಡೆಗಳಿಗೆ ಭದ್ರತಾ ಕರ್ತವ್ಯಗಳನ್ನು ಹಸ್ತಾಂತರಿಸಲು ಗಡುವು ನಿಗದಿಮಾಡುವುದು ಅತೀ ಶೀಘ್ರವೆನಿಸುತ್ತದೆಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ತಿಳಿಸಿದ್ದಾರೆ.

2010ರಿಂದ ಕ್ರಮೇಣ ಭದ್ರತಾ ಹಸ್ತಾಂತರಕ್ಕೆ ವೇಳಾಪಟ್ಟಿ ನಿಗದಿಮಾಡಬೇಕೆಂದು ಬ್ರಿಟನ್ ಪ್ರಧಾನ ಮಂತ್ರಿ ಗೋರ್ಡನ್ ಬ್ರೌನ್ ಪ್ರಸ್ತಾವನೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಗೇಟ್ಸ್ ಅವರನ್ನು ಪ್ರಶ್ನಿಸಿದಾಗ ಗಡುವು ನಿಗದಿಮಾಡುವುದು ಶೀಘ್ರವೆನಿಸುತ್ತದೆಂದು ಹೇಳಿದರು.

ಕೆಲವು ಆಫ್ಘನ್ ಪ್ರಾಂತ್ಯಗಳಲ್ಲಿ ಮತ್ತು ಜಿಲ್ಲೆಗಳಲ್ಲಿ ಆಫ್ಘನ್ ಸೇನೆಗೆ ಭದ್ರತಾ ಕರ್ತವ್ಯ ಹಸ್ತಾಂತರ ಸದ್ಯದಲ್ಲೇ ನಡೆಯಬಹುದಾದರೂ, ಭದ್ರತೆ ಕುರಿತ ನೇತೃತ್ವವನ್ನು ಕಾಬೂಲ್ ಶೀಘ್ರದಲ್ಲೇ ವಹಿಸಬೇಕೆಂದು ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ಬಯಸುತ್ತವೆಂದು ಗೇಟ್ಸ್ ಹೇಳಿದ್ದಾರೆ.

ಆದರೆ ಆಫ್ಘನ್ನರು ಸಿದ್ಧರಾಗುವ ಮುಂಚೆಯೇ ಜವಾಬ್ದಾರಿಯನ್ನು ವರ್ಗಾಯಿಸುವುದು ಪ್ರತ್ಯುತ್ಪಾದಕವೆಂದು ಅವರು ತಿಳಿಸಿದರು. ಅಮೆರಿಕದ ಪಡೆಗಳು ಕಳೆದ ಎರಡು ವರ್ಷಗಳಿಂದ ಬಾಗ್ದಾದ್ ಸರ್ಕಾರದ ಪಡೆಗಳಿಗೆ ಭದ್ರತಾ ಹೊಣೆಯನ್ನು ಕ್ರಮೇಣ ವರ್ಗಾಯಿಸಿದ ಇರಾಕ್ ಮಾದರಿಯನ್ನು ಗೇಟ್ಸ್ ಉದಾಹರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನ್ಯಾಟೊ, ಆಫ್ಘನ್, ಗಡುವು, ಗೇಟ್ಸ್