ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 'ಪಾಕ್ ಪ್ರಾಯೋಜಿತ ಭಯೋತ್ಪಾದನೆಗೆ ಭಾರತ ಬಲಿಪಶು' (Singh | Pakistan | Washington | Terrorism)
Feedback Print Bookmark and Share
 
PTI
PTI
ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಗೆ ಭಾರತ ಬಲಿಪಶುವಾಗಿದೆಯೆಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಶುಕ್ರವಾರ ತಿಳಿಸಿದ್ದಾರೆ. ಕಳೆದ ವರ್ಷದ ಮುಂಬೈ ಹತ್ಯಾಕಾಂಡದ ಮಾದರಿಯಲ್ಲೇ ಆ ರಾಷ್ಟ್ರದಲ್ಲಿ ನೆಲೆಹೊಂದಿರುವ ಭಯೋತ್ಪಾದಕರು ದಾಳಿಗಳಿಗೆ ಸಂಚು ರೂಪಿಸಿವೆಯೆಂದು ಗುಪ್ತಚರ ವರದಿಗಳು ಈಗಲೂ ಹೇಳುತ್ತಿವೆಯೆಂದು ಸಿಂಗ್ ಬಹಿರಂಗಮಾಡಿದ್ದಾರೆ.

ಅಮೆರಿಕಕ್ಕೆ ಅಧಿಕೃತ ಭೇಟಿಗೆ ಮುನ್ನ, ವಾಷಿಂಗ್ಟನ್‌ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಸಿಂಗ್, ಭಯೋತ್ಪಾದನೆಯನ್ನು ರಾಷ್ಟ್ರದ ನೀತಿಯಾಗಿ ಪಾಕಿಸ್ತಾನ ಬಳಸಿರುವುದನ್ನು ದುರಂತವೆಂದು ಪರಿಗಣಿಸಿದರು. ನೆರೆಯ ದೇಶದ ವಿರುದ್ಧ ತನ್ನ ಪ್ರದೇಶವನ್ನು ಬಳಸಲು ಅವಕಾಶ ನೀಡುವುದಿಲ್ಲವೆಂಬ ಷರತ್ತಿನ ಮೇಲೆ ಆ ರಾಷ್ಟ್ರದ ಜತೆ ನೆನೆಗುದಿಗೆ ಬಿದ್ದ ಎಲ್ಲ ವಿಷಯಗಳನ್ನು ಇತ್ಯರ್ಥ ಮಾಡಲು ಭಾರತ ಸಿದ್ಧವಿದೆಯೆಂದು ಸಿಂಗ್ ಹೇಳಿದರು.

ಪಾಕಿಸ್ತಾನ ಮ‌ೂಲದ ಭಯೋತ್ಪಾದಕರು ಇದೇ ರೀತಿಯ ಕೃತ್ಯಗಳಿಗೆ ಯೋಜಿಸಿದ್ದಾರೆಂದು ತಾವು ಪ್ರತಿದಿನ ಗುಪ್ತಚರ ವರದಿಗಳನ್ನು ಸ್ವೀಕರಿಸುತ್ತಿರುವುದಾಗಿ ಸಿಂಗ್ ಸಂದರ್ಶನದಲ್ಲಿ ನುಡಿದರು. ಸಿಂಗ್ ಅವರು ವಾಷಿಂಗ್ಟನ್‌ಗೆ ಆಗಮಿಸುವ ದಿನವಾದ ಭಾನುವಾರ ಸಂದರ್ಶನವನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತಿದೆ.ಆದಾಗ್ಯೂ,ಭಾರತದಿಂದ ಪಾಕಿಸ್ತಾನ ಯಾವುದೇ ರೀತಿಯಲ್ಲಿ ಭಯಪಡಬೇಕಿಲ್ಲವೆಂದು ಪ್ರತಿಪಾದಿಸಿದ ಅವರು, ಭಯೋತ್ಪಾದನೆಯನ್ನು ರಾಷ್ಟ್ರ ನೀತಿಯ ಅಸ್ತ್ರವಾಗಿ ಬಳಸುವ ಹಂತಕ್ಕೆ ಪಾಕಿಸ್ತಾನ ತಲುಪಿದೆಯೆಂದು ತಿಳಿಸಿದರು.

ದ್ವಿಪಕ್ಷೀಯ ಮಾತುಕತೆ ಮ‌ೂಲಕ ಪಾಕಿಸ್ತಾನದ ಜತೆ ಎಲ್ಲ ವಿಷಯಗಳನ್ನು ಬಗೆಹರಿಸಿಕೊಳ್ಳಲು ನಾವು ಬದ್ಧವಾಗಿದ್ದೇವೆ. ಆದರೆ ಪಾಕಿಸ್ತಾನವು ಭಾರತದ ವಿರುದ್ಧ ಭಯೋತ್ಪಾದನೆಗೆ ತನ್ನ ನೆಲವನ್ನು ಬಳಸಬಾರದೆನ್ನುವುದು ನಮ್ಮ ಷರತ್ತಾಗಿದೆಯೆಂದು ಸಿಂಗ್ ಸ್ಪಷ್ಟಪಡಿಸಿದರು.ಆ ಬದ್ಧತೆಗೆ ಪಾಕಿಸ್ತಾನ ನಿಜವಾಗಲೂ ಗೌರವ ನೀಡಿದರೆ, ನಮ್ಮ ನಡುವೆ ನೆನೆಗುದಿಗೆ ಬಿದ್ದಿರುವ ಎಲ್ಲ ವಿವಾದ ಇತ್ಯರ್ಥಕ್ಕೆ ಮಾತುಕತೆಗೆ ಇಳಿಯಬಹುದೆಂದು ಅವರು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ