ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪ್ರಧಾನಿ ಸಿಂಗ್ ಜತೆ ಕ್ಲಿಂಟನ್ ಭೋಜನಕೂಟದ ಸಭೆ (Clinton | South Asia | Ian Kelly | Lunch)
Feedback Print Bookmark and Share
 
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಜತೆ ಮಂಗಳವಾರ ಭೋಜನಕೂಟದ ಸಭೆಯಲ್ಲಿ ಭಾರತದ ಜತೆ ಆಯಕಟ್ಟಿನ ಮಾತುಕತೆ ಪ್ರಕ್ರಿಯೆ, ದಕ್ಷಿಣ ಏಷ್ಯಾದ ಬೆಳವಣಿಗಗಳು ಸೇರಿದಂತೆ ರಾಜತಾಂತ್ರಿಕ ವಿಷಯಗಳನ್ನು ಚರ್ಚಿಸಲಿದ್ದಾರೆಂದು ಉನ್ನತಾಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ವಿದೇಶಾಂಗ ಇಲಾಖೆಯ ವಕ್ತಾರ ಐಯಾನ್ ಕೆಲ್ಲಿ ಈ ವಿಷಯ ಕುರಿತು ತಿಳಿಸುತ್ತಾ, ವಿದೇಶಾಂಗ ಕಾರ್ಯದರ್ಶಿಯವರು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳು ಸೇರಿದಂತೆ ವ್ಯಾಪಕ ವಿಷಯಗಳನ್ನು ಪ್ರಧಾನಿ ಸಿಂಗ್ ಜತೆ ಚರ್ಚಿಸಲಿದ್ದಾರೆಂದು ಹೇಳಿದರು.

ವಿದೇಶಾಂಗ ಕಾರ್ಯದರ್ಶಿ ಈಗತಾನೇ ಆಫ್ಘಾನಿಸ್ತಾನದಿಂದ ಹಿಂತಿರುಗಿದ್ದರಿಂದ ಪ್ರಾದೇಶಿಕ ವಿಷಯಗಳು ಮುಖ್ಯವಾಗಿದ್ದು, ದಕ್ಷಿಣ ಏಷ್ಯಾ ಸಂಬಂಧಿತ ವಿಷಯಗಳನ್ನು ಸಿಂಗ್ ಜತೆ ಮಾತನಾಡಲು ಬಯಸಿದ್ದಾರೆಂದು ಕೆಲ್ಲಿ ಮನದಟ್ಟು ಮಾಡಿದರು.

ಭಾರತದ ಜತೆ ಆಯಕಟ್ಟಿನ ಮಾತುಕತೆ ಪ್ರಕ್ರಿಯೆಯಲ್ಲಿ ವಿದೇಶಾಂಗ ಇಲಾಖೆಯ ಪಾತ್ರದ ಬಗ್ಗೆ ಕೂಡ ಮಾತನಾಡಲು ಅವರು ಬಯಸಿದ್ದಾರೆಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ