ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪೇಶಾವರದಲ್ಲಿ ರಿಮೋಟ್ ಬಾಂಬ್ ದಾಳಿಗೆ 2 ಬಲಿ (Peshawar | Bomb | Suicide attack | Court complex)
Feedback Print Bookmark and Share
 
ವಾಯವ್ಯ ಪಾಕಿಸ್ತಾನ ನಗರ ಪೇಶಾವರದಲ್ಲಿ ಅಜ್ಞಾತ ದುಷ್ಕರ್ಮಿಗಳು ಪೊಲೀಸ್ ವಾಹನವೊಂದರ ಮೇಲೆ ಬಾಂಬ್ ದಾಳಿ ನಡೆಸಿದ್ದರಿಂದ ಇಬ್ಬರು ಪೊಲೀಸರು ಅಸುನೀಗಿದ್ದು 7 ಜನರು ಗಾಯಗೊಂಡಿದ್ದಾರೆ. ಕೋರ್ಟ್ ಸಂಕೀರ್ಣದಲ್ಲಿ ಉಗ್ರಗಾಮಿಗಳ ಬಾಂಬ್ ದಾಳಿಗೆ 19 ಜನರು ಬಲಿಯಾದ ಕೆಲವೇ ಗಂಟೆಗಳಲ್ಲಿ ಈ ದುರ್ಘಟನೆ ಸಂಭವಿಸಿದೆ.

ಯಕಾಟೂಟ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ವಾಡಿಕೆಯ ಗಸ್ತುತಿರುಗುತ್ತಿದ್ದ ಪೊಲೀಸ್ ವ್ಯಾನೊಂದರ ಮೇಲೆ ಉಗ್ರಗಾಮಿಗಳು ಮಧ್ಯರಾತ್ರಿ ಬಳಿಕ ಸ್ವಲ್ಪ ಹೊತ್ತಿನಲ್ಲೇ ದೂರನಿಯಂತ್ರಕ ಸಾಧನದ ಮ‌ೂಲಕ ಬಾಂಬ್ ಸ್ಫೋಟಿಸಿದರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಗಾಯಗೊಂಡ ಮ‌ೂವರ ಸ್ಥಿತಿ ಚಿಂತಾಜನಕವಾಗಿಯೆಂದು ಅಧಿಕಾರಿಗಳು ಹೇಳಿದ್ದಾರೆ.

ಕೆಲವೇ ಗಂಟೆಗಳ ಮುಂಚೆ, ಆತ್ಮಾಹುತಿ ಬಾಂಬರ್ ಪೇಶಾವರದ ದಂಡುಪ್ರದೇಶದಲ್ಲಿರುವ ಕಿಕ್ಕಿರಿದ ಕೋರ್ಟ್ ಸಂಕೀರ್ಣದ ಮೇಲೆ ದಾಳಿ ನಡೆಸಿದ್ದರಿಂದ ಮ‌ೂವರು ಪೊಲೀಸರು ಸೇರಿದಂತೆ 19 ಜನರು ಹತರಾಗಿದ್ದರು ಮತ್ತು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ