ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕ ಸೈನಿಕರಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣ (America | Suicide | Jaireli | Washington)
Feedback Print Bookmark and Share
 
ಅಮೆರಿಕದಲ್ಲಿ ಸೈನಿಕರ ಆತ್ಮಹತ್ಯೆ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿದ್ದು, ಪ್ರಸಕ್ತ ವರ್ಷ 211 ಸೈನಿಕರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಚ್ಚಿಬೀಳಿಸಿದೆಯೆಂದು ಅಮೆರಿಕ ಸೇನೆಯ ಉಪಮುಖ್ಯಸ್ಥ ಜನರಲ್ ಪೀಟರ್ ಜೈರೆಲಿ ಕಳವಳ ವ್ಯಕ್ತಪಡಿಸಿದ್ದಾರೆ.

ವಿದೇಶಗಳಲ್ಲಿ ಉಗ್ರಗಾಮಿಗಳ ಬಂಡುಕೋರ ಕೃತ್ಯಗಳ ವಿರುದ್ಧ ಹೋರಾಟಕ್ಕೆ ನಿಯೋಜಿತರಾಗಿರುವ ಅಮೆರಿಕ ಸೈನಿಕರು ತೀವ್ರ ಮಾನಸಿಕ ಒತ್ತಡಗಳಿಗೆ ಗುರಿಯಾಗುತ್ತಿರುವುದು ಆತ್ಮಹತ್ಯೆ ಹೆಚ್ಚಳಕ್ಕೆ ಕಾರಣಗಳಲ್ಲಿ ಒಂದೆಂದು ಭಾವಿಸಲಾಗಿದೆ.

ಸೈನಿಕರು ಆತ್ಮಹತ್ಯೆಗೆ ಶರಣಾಗುವುದರ ನಿಖರ ಕಾರಣ ಪತ್ತೆಹಚ್ಚಲು ಶ್ರಮಿಸಲಾಗುತ್ತಿದೆಯೆಂದು ಅವರು ಹೇಳಿದ್ದಾರೆ. ಕಳೆದ ವರ್ಷ ಕೂಡ 187 ಸೈನಿಕರು ಆತ್ಮಹತ್ಯೆಗೆ ಶರಣಾಗಿದ್ದರು. ಸ್ವದೇಶದಿಂದ ದೂರ ಉಳಿಯುವುದರಿಂದ ಒಂಟಿತನದ ಭಾವನೆ ಮತ್ತು ಮಾನಸಿಕ ಒತ್ತಡಹೆಚ್ಚಳವೂ ಆತ್ಮಹತ್ಯೆಗೆ ಪ್ರೇರೇಪಣೆಯೆಂದು ವಿಶ್ಲೇಷಿಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ