ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಾನವ ಕೊಬ್ಬು ಲೀಟರ್‌ಗೆ 15,000 ಡಾಲರ್‌ಗೆ ಮಾರಾಟ (Cosmetics | Peru | Europe | Fat)
Feedback Print Bookmark and Share
 
ಯುರೋಪ್‌ನಲ್ಲಿ ಸೌಂದರ್ಯವರ್ಧಕ ಬಳಕೆಗಳಿಗೆ ಹತ್ತಾರು ಜನರನ್ನು ಕೊಂದು ಕೊಬ್ಬು ಮತ್ತು ಅಂಗಾಂಶಗಳನ್ನು ತೆಗೆದು ಮಾರಾಟ ಮಾಡಿರುವ ಸಂಶಯದ ಮೇಲೆ ಪೆರುವಿನಲ್ಲಿ ನಾಲ್ಕು ಜನರನ್ನು ಬಂಧಿಸಲಾಗಿದೆ.

ಹೊಸವಲಯದ ರಸ್ತೆಗಳಲ್ಲಿ ಜನರನ್ನು ನಕಲಿ ಉದ್ಯೋಗದ ಆಮಿಷ ತೋರಿಸಿ ದಾಳಿ ಮಾಡುವ ಪಾತಕಿಗಳ ತಂಡ, ಅವರನ್ನು ಹತ್ಯೆ ಮಾಡಿ ಮೈಯಲ್ಲಿನ ಕೊಬ್ಬನ್ನು ತೆಗೆದು ಲೀಟರ್‌ಗೆ 15,000 ಡಾಲರ್‌ಗೆ ಮಾರಾಟ ಮಾಡುತ್ತಿದ್ದ ಆಘಾತಕಾರಿ ಸಂಗತಿ ವರದಿಯಾಗಿದೆ.

ಇಬ್ಬರು ಇಟಲಿ ಪೌರರು ಸೇರಿದಂತೆ ಇತರೆ ಶಂಕಿತ ಪಾತಕಿಗಳು ಇನ್ನೂ ತಪ್ಪಿಸಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಸುಮಾರು 60 ಜನರ ಕಣ್ಮರೆ ಹಿಂದೆ ಈ ಪಾತಕಿಗಳ ಕೈವಾಡವಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯೊಂದರಲ್ಲಿ ಈ ಪಾತಕಿಗಳು ಹತ್ಯೆ ಮಾಡಿ ತೆಗೆದಿದ್ದ ಮಾನವ ದೇಹದ ಕೊಬ್ಬು ಮತ್ತು ಹತ್ಯೆಯಾದ ದುರ್ದೈವಿಯ ಭಾವಚಿತ್ರವನ್ನು ವರದಿಗಾರರಿಗೆ ಪೊಲೀಸರು ಪ್ರದರ್ಶಿಸಿದರು.

ಒಂದು ಹತ್ಯೆಯು ಸೆಪ್ಟೆಂಬರ್ ಮಧ್ಯಾವಧಿಯಲ್ಲಿ ನಡೆದಿದ್ದು, ವ್ಯಕ್ತಿಯ ದೇಹದ ಅಂಗಾಂಶವನ್ನು ಮಾರಾಟದ ಸಲುವಾಗಿ ತೆಗೆಯಲಾಗಿತ್ತು. ಪ್ರಯೋಗಶಾಲೆಗಳಲ್ಲಿ ಮಾನವ ದೇಹದ ಕೊಬ್ಬಿನ ಅಂಶವನ್ನು ತೆಗೆದು ಮಾರುವ ಗುರಿಯೊಂದಿಗೆ ತಾವು ಜನರನ್ನು ಹತ್ಯೆ ಮಾಡುತ್ತಿದ್ದ ವಿಧಾನಗಳನ್ನು ಶಂಕಿತರು ವಿವರಿಸಿದ್ದಾರೆಂದು ಸಿಎಂಡಿಆರ್ ಎಂಜೆಲ್ ಟೊಲೆಡೊ ರಾಯ್ಟರ್ಸ್‌ಗೆ ತಿಳಿಸಿದ್ದಾರೆ.

ಈ ಕೊಬ್ಬಿನ ಪದಾರ್ಥಗಳನ್ನು ಯುರೋಪ್‌ನ ಸೌಂದರ್ಯವರ್ಧಕ ಮತ್ತು ಔಷಧ ಕಂಪೆನಿಗಳಿಗೆ ಮಾರಾಟ ಮಾಡಲಾಗಿದೆಯೆಂದು ಶಂಕಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಪೆರುವಿನಿಂದ ಮಾನವ ಕೊಬ್ಬನ್ನು ಕಳ್ಳಸಾಗಣೆ ಮಾಡುವ ಜಾಲ ಕಾರ್ಯಾಚರಿಸುತ್ತಿದೆಯೆಂಬ ಬಗ್ಗೆ ಸುಳಿವು ಸಿಕ್ಕಿದೆಯೆಂದು ಜನರಲ್ ಫೆಲಿಕ್ಸ್ ಬುರ್ಗಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯುರೋಪ್, ಕೊಬ್ಬು, ಪೆರು, ಪಾತಕಿ